ಸನಾತನ ಕಾಲದಿಂದಲೂ ರೂಢಿಸಿಕೊಂಡು ಬಂದ ಹೋಮಗಳಲ್ಲಿ ಅಗ್ನಿಹೋತ್ರ ಹೋಮ ಕೂಡ ಒಂದು. ಸರ್ವರೋಗಕ್ಕೂ ಮದ್ದು ಎನ್ನುತ್ತಾರೆ ವಿಜ್ಞಾನಿಗಳು. ಕಡಿಮೆ ಸಮಯದಲ್ಲಿ ಮಾಡಬಹುದಾದ ಅಗ್ನಿ ಹೋತ್ರ ಹೋಮವನ್ನು ಮಾಡುವುದು ಹೇಗೆ..? ಇದರ ಪ್ರಯೋಜನಗಳೇನು ನೋಡಿ.
ಅಗ್ನಿಹೋತ್ರ ಹೋಮದ ಪ್ರಯೋಜನ:
ಸರಳ ಹೋಮ ಪದ್ಧತಿ ಇದಾಗಿದ್ದು, ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯಕ್ಕೆ ಸರಿಯಾಗಿ ಕೇವಲ 15 ನಿಮಿಷಗಳಲ್ಲಿ ಈ ಹೋಮವನ್ನು ಮಾಡಬಹುದು. ಮನೆಯಲ್ಲಿ ಯಾರು ಬೇಕಾದರೂ ಈ ಹೋಮವನ್ನು ಮಾಡಬಹುದು. ವಯಸ್ಸಿನ ಭೇದ – ಭಾವವಿಲ್ಲದೇ ಎಲ್ಲರೂ ಈ ಹೋಮವನ್ನು ಮಾಡಬಹುದು.
Add Comment