ಇಡೀ ಬ್ರಹ್ಮಾಂಡ ಅಸ್ತಿತ್ವವಿರುವ ಅನಂತದಲ್ಲಿ ಪರಿಣಾಮಕಾರಿ ಶಕ್ತಿಗಳು

ಇಡೀ ಬ್ರಹ್ಮಾಂಡ ಅಸ್ತಿತ್ವವಿರುವ ಅನಂತದಲ್ಲಿ ಪರಿಣಾಮಕಾರಿ ಶಕ್ತಿಗಳು ಬೆಳಕು, ಅಗ್ನಿ, ಗುರುತ್ವಾಕರ್ಷಣ ಶಕ್ತಿ ಮತ್ತು ಅಲೆಗಳು, ಆಯಸ್ಕಾಂತೀಯ ಶಕ್ತಿ ಮತ್ತಿತರ ಶಕ್ತಿಗಳು. ಇದರ ಮುಖ್ಯ
ಲಕ್ಷಣ ಶಬ್ದ.

ಗಾಳಿ(ವಾಯು)
ಸುಮಾರು 400 ಕಿಮೀ ದೂರದ ಭೂಮಿಯ ವಾತಾವರಣವು ಆಮ್ಲಜನಕ, ನೈಟ್ರೋಜನ್(78), ಕಾರ್ಬನ್ ಡೈಆಕ್ಸೈಡ್, ಹೀಲಿಯಂ ಮತ್ತಿತರ ವಿಧದ ಅನಿಲಗಳು, ಧೂಳಿನ ಕಣಗಳು, ತೇವಾಂಶ ಮತ್ತು ಕೆಲವು ಪ್ರಮಾಣದ ಆವಿಯನ್ನು ಹೊಂದಿದೆ. ಮಾನವ ಜೀವಿಗಳು, ಸಸ್ಯಗಳು ಮತ್ತು ಪ್ರಾಣಿಗಳು ಮತ್ತು ಬೆಂಕಿ ಕೂಡ ಇವುಗಳ ಮೇಲೆ ಅವಲಂಬಿತವಾಗಿದೆ. ಇದರ ಮುಖ್ಯ ಲಕ್ಷಣಗಳು ಶಬ್ದ ಮತ್ತು ಸ್ಪರ್ಶ.

ಅಗ್ನಿ
ಬೆಳಕು ಮತ್ತು ಬೆಂಕಿಯ ಬಿಸಿ, ಸಿಡಿಲು, ಜ್ವಾಲಾಮುಖಿ, ಜ್ವರ ಅಥವಾ ಜ್ವಾಲೆಯ ಬಿಸಿ, ಇಂಧನ, ರಾತ್ರಿ, ಹಗಲು, ಋತುಮಾನಗಳು ಮತ್ತು ಸೌರವ್ಯೂಹದ ಮತ್ತಿತರ ಅಂಶಗಳು. ಇದರ ಮುಖ್ಯ ಲಕ್ಷಣಗಳು ಶಬ್ದ, ಸ್ಪರ್ಶ ಮತ್ತು ರೂಪ.

ಜಲ
ಮಳೆ, ನದಿ, ಸಮುದ್ರವನ್ನು ಪ್ರತಿನಿಧಿಸಿದ್ದು ದ್ರವ ರೂಪ ಅಥವಾ ಮಂಜುಗಡ್ಡೆಯ ರೂಪ, ಆವಿ ಮತ್ತು ಮೋಡದ ರೂಪದಲ್ಲಿದೆ. ಜಲಜನಕ ಮತ್ತು ಆಮ್ಲಜನಕದ ಮಿಶ್ರಣವಾದ ಇದು 2:1 ಅನುಪಾತದಲ್ಲಿರುತ್ತದೆ. ಪ್ರತಿಯೊಂದು ಸಸ್ಯ ಮತ್ತು ಜೀವಿಗಳಲ್ಲಿ ಕೆಲವು ಪ್ರಮಾಣದ ನೀರಿನ ಅಂಶವಿದ್ದು, ಅದರ ಮುಖ್ಯ ಲಕ್ಷಣಗಳು ಶಬ್ದ, ಸ್ಪರ್ಶ ರೂಪ ಮತ್ತು ರಸ.

ಭೂಮಿ
ಸೂರ್ಯನ ಸುತ್ತ ತಿರುಗುವ ಮೂರನೇ ಗ್ರಹವಾದ ಭೂಮಿ ಉತ್ತರ ಮತ್ತು ದಕ್ಷಿಣ ದ್ರುವಗಳೊಂದಿಗೆ ದೊಡ್ಡ ಮ್ಯಾಗ್ನೆಟ್ನಂತಿದೆ. ಯಾವುದೇ ಜೀವಿ ಅಥವಾ ವಸ್ತುವಿನ ಮೇಲೆ ಭೂಮಿಯ ಆಯಸ್ಕಾಂತೀಯ ಮತ್ತು ಗುರುತ್ವ ಶಕ್ತಿ ಅಗಾಧ ಪರಿಣಾಮ ಉಂಟುಮಾಡುತ್ತದೆ. ಭೂಮಿಯು ಭೂಮಧ್ಯರೇಖೆಯಲ್ಲಿ ಇಪ್ಪತ್ತಮೂರುವರೆ ಡಿಗ್ರಿ ತಲಾ 6 ತಿಂಗಳ ಕಾಲ ಎರಡೂ ಕಡೆ ವಾಲುವುದರಿಂದ ಉತ್ತರಾಯಣ ಮತ್ತು ದಕ್ಷಿಣಾಯಣ ಎಂದು ಕರೆಯುತ್ತಾರೆ. ಪಶ್ಚಿಮದಿಂದ ಪೂರ್ವದವರೆಗೆ ತನ್ನ ಕಕ್ಷೆಯಲ್ಲಿ ತಿರುಗುವುದರ ಫಲ ರಾತ್ರಿ, ಹಗಲು ಘಟಿಸುತ್ತದೆ. ಭೂಮಿಯ ನಾಲ್ಕನೇ ಮೂರು ಭಾಗ ನೀರು ಮತ್ತು ನಾಲ್ಕನೇ ಒಂದು ಭಾಗ ನೆಲವಾಗಿದೆ. ಅದರ ಮುಖ್ಯಲಕ್ಷಣಗಳು ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗುಣ.

Add Comment

Your email address will not be published. Required fields are marked *