ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ತಿಂದರೆ ಸಿಗುವ ಲಾಭಗಳು.

ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ತಿಂದರೆ ಸಿಗುವ ಲಾಭಗಳು.

ಭಾರತದಲ್ಲಿ ಅದರಲ್ಲೂ ಹಿಂದೂಗಳು ತುಳಸಿಯನ್ನು ತುಂಬಾ ಪವಿತ್ರವೆಂದು ಭಾವಿಸುವರು. ತುಳಸಿ ಗಿಡದಲ್ಲಿ ದೇವದೇವತೆಗಳು ನೆಲೆಸಿರುವರು ಎಂದು ಪುರಾಣಗಳು ಕೂಡ ಹೇಳಿವೆ. ಅದೇ ರೀತಿಯಲ್ಲಿ ತುಳಸಿ ಗಿಡವನ್ನು ಪುರಾತನ ಕಾಲದಿಂದಲೂ ಆಯುರ್ವೇದ ದಲ್ಲಿ ಔಷಧಿಯಾಗಿಯೂ ಬಳಸಿಕೊಂಡು ಬರಲಾಗುತ್ತಾ ಇದೆ. ತುಳಸಿ ಎಲೆಯಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳು ಇದೆ ಎಂದು ಹೇಳಲಾಗುತ್ತದೆ.

ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ತಿಂದರೆ ಸಿಗುವ ಲಾಭಗಳು

ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವಿಸುವುದರಿಂದ ಸಿಗುವ ಲಾಭಗಳ ಬಗ್ಗೆ ನಿಮಗೆ ತಿಳಿದಿದೆಯೋ ಇಲ್ಲವೋ, ಆದರೆ ಇದರಿಂದ ದೇಹದೊಳಗಿನ ಹಾಗೂ ಹೊರಗಿನ ಆರೋಗ್ಯಕ್ಕೆ ಹಲವಾರು ಲಾಭಗಳೂ ಇವೆ. ತುಳಸಿ ಎಲೆಗಳಲ್ಲಿ ಚಿಕಿತ್ಸಕ ಗುಣಗಳು ಇದೆ ಎಂದು ಹಿಂದಿನಿಂದಲೂ ಪರಿಗಣಿಸಲಾಗಿದೆ.

ತುಳಸಿ ಎಲೆಗಳನ್ನು ಸೇವಿಸುವ ಅಥವಾ ಅದರ ನೀರು ಕುಡಿಯುವ ಪ್ರಮೂಕ ಲಾಭವೆಂದರೆ ಇದು ಪ್ರತಿರೋಧಕ ವ್ಯವಸ್ಥೆ ಬಲಪಡಿಸುವುದು. ತುಳಸಿ ಎಲೆಗಳನ್ನು ಆ್ಯಂಟಿ ಆಕ್ಸಿಡೆಂಟ್ ಸಮೃದ್ಧವಾಗಿದೆ ಮತ್ತು ಇದು ಸೋಂಕಿನ ವಿರುದ್ಧ ಹೋರಾಡುವುದು. ಈಗ ನಾವು ತುಳಸಿ ಎಲೆಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಸಿಗುವ ಲಾಭಗಳ ಬಗ್ಗೆ ಚರ್ಚಿಸುವ.

ಜೀರ್ಣಕ್ರಿಯೆ ವ್ಯವಸ್ಥೆ ಆರೋಗ್ಯವಾಗಿಡುವುದು

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವಿಸಿದರೆ ಅದರಿಂದ ಜೀರ್ಣಕ್ರಿಯೆ ವ್ಯವಸ್ಥೆಯು ಆರೋಗ್ಯವಾಗಿರುವುದು. ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವಿಸಿದರೆ ಆಗ ದೇಹದಲ್ಲಿನ ಪಿಎಚ್ ಮಟ್ಟವನ್ನು ಅದು ಕಾಪಾಡುವುದು ಮತ್ತು ದೇಹದಲ್ಲಿ ಆಮ್ಲೀಯತೆಯನ್ನು ಕೂಡ ನಿಯಂತ್ರಣದಲ್ಲಿ ಇಡುವುದು.

ಮಾನಸಿಕ ಒತ್ತಡ ತಗ್ಗಿಸುವುದು

ತುಳಸಿ ಎಲೆಗಳಲ್ಲಿ ಇರುವಂತಹ ಅಡಾಪ್ಟೋಜೆನ್ ಎನ್ನುವ ಅಂಶವು ಮಾನಸಿಕ ಒತ್ತಡವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವಿಸಿದರೆ ಅದರಿಂದ ನರ ವ್ಯವಸ್ಥೆಗೆ ಆರಾಮವಾಗಲು ನೆರವಾಗುವುದು ಮತ್ತು ರಕ್ತ ಸಂಚಾರವು ಸುಧಾರಣೆ ಆಗುವುದು. ಪ್ರತೀ ಎರಡು ದಿನಕ್ಕೊಮ್ಮೆ ಐದು ತುಳಸಿ ಎಲೆಗಳನ್ನು ಸೇವಿಸಿ.

ಸಾಮಾನ್ಯ ಶೀತದಿಂದ ರಕ್ಷಣೆ ಮಾಡುವುದು

ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಜಗಿಯುವುದರಿಂದ ಅಥವಾ ತುಳಸಿ ನೀರು ಕುಡಿದರೆ ಆಗ ಸಾಮಾನ್ಯ ಶೀತದ ಸಮಸ್ಯೆಯು ಪರಿಣಾಮಕಾರಿ ಆಗಿ ನಿವಾರಣೆ ಆಗುವುದು. ತುಳಸಿಯಲ್ಲಿ ಸೂಕ್ಷ್ಮಾಣು ವಿರೋಧಿ ಗುಣಗಳು ಇರುವುದೇ ಇದಕ್ಕೆ ಕಾರಣವಾಗಿದೆ.

ಬಾಯಿಯ ದುರ್ವಾಸನೆ ತಡೆಯುವುದು

ತುಳಸಿ ಎಲೆಗಳನ್ನು ಬಾಯಿಯ ದುರ್ವಾಸನೆ ಮತ್ತು ಇತರ ಸಮಸ್ಯೆಗಳನ್ನು ನಿವಾರಣೆ ಮಾಡುವುದು. ತುಳಸಿ ಎಲೆಗಳಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ ಮತ್ತು ಇದು ಬಾಯಿಯ ದುರ್ವಾಸನೆಯನ್ನು ತುಂಬಾ ಪರಿಣಾಮಕಾರಿ ಆಗಿ ನಿವಾರಣೆ ಮಾಡುವುದು. ತುಳಸಿ ಎಲೆಗಳನ್ನು ಟೂಥ್ ಪೇಸ್ಟ್ ಹಾಗೆ ಬಳಕೆ ಮಾಡಬಹುದು.

ಇಮ್ಯೂನ್ ಮಾಡ್ಯುಲೇಟರ್

ತುಳಸಿ ಎಲೆಗಳು ಇಮ್ಯೂನ್ ಮಾಡ್ಯೂಲೇಟರ್ ಆಗಿ ಕೆಲಸ ಮಾಡುವುದು. ಇದರಿಂದ ದೇಹದ ಪ್ರತಿರೋಧಕ ಶಕ್ತಿಯು ಸುಧಾರಣೆ ಆಗುವುದು ಮತ್ತು ನಿರ್ವಹಿಸುವುದು. ವೈರಸ್ ಮತ್ತು ಬ್ಯಾಕ್ಟೀರಿಯಾಗಳು ಉಂಟು ಮಾಡುವ ಹಾನಿಕಾರಕ ರೋಗದ ವಿರುದ್ಧ ಇದು ಹೋರಾಡುವುದು ಮತ್ತು ಆರೋಗ್ಯಕಾರಿ ಪ್ರತಿರೋಧಕ ಅಂಗಾಂಶಗಳನ್ನು ಇದು ನಿರ್ಮಾಣ ಮಾಡುವುದು.
ವಿಷಕಾರಿ ಫ್ರೀ ರ್ಯಾಡಿಕಲ್ ನಿಂದ ಆರೋಗ್ಯಕಾರಿ ಅಂಗಾಂಶಗಳನ್ನು ಕಾಪಾಡಲು ತುಳಸಿ ಎಲೆಗಳಲ್ಲಿ ಇರುವ ಆ್ಯಂಟಿಆಕ್ಸಿಡೆಂಟ್ ನೆರವಾಗುವುದು. ತುಳಸಿ ಎಲೆಗಳಲ್ಲಿ ಇರುವಂತಹ ಔಷಧೀಯ ಗುಣಗಳು ಸೋಂಕಿನಿಂದ ದೇಹವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು.

ಮಧುಮೇಹ ಮತ್ತು ಕಿಡ್ನಿ ಕಲ್ಲಿನ ಸಮಸ್ಯೆ ತಗ್ಗಿಸುವುದು

ತುಳಸಿ ಎಲೆಗಳಲ್ಲಿ ಯುಜೆನಾಲ್, ಕ್ಯಾರಿಯೋಫಿಲೀನ್ ಮತ್ತು ಮೀಥೈಲ್ ಯುಜೆನಾಲ್ ಎನ್ನುವ ಸಾರಭೂತ ತೈಲವಿದೆ. ಈ ಅಂಶಗಳು ಮೇಧೋಜೀರಕ ಗ್ರಂಥಿಯ ಅಂಗಾಂಶಗಳು ಇನ್ಸುಲಿನ್ ಜಮೆ ಮಾಡಲು ಮತ್ತು ಬಿಡುಗಡೆಗೊಳಿಸಲು ನೆರವಾಗುವುದು.

ಇನ್ಸುಲಿನ್ ಸೂಕ್ಷ್ಮತೆಯಿಂದಾಗಿ ದೇಹದಲ್ಲಿ ರಕ್ತದ ಸಕ್ಕರೆ ಮಟ್ಟವು ಕಡಿಮೆ ಆಗುವುದು ಮತ್ತು ಮಧುಮೇಹವನ್ನು ನಿವಾರಣೆ
ಮಾಡುವುದು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವಿಸಿದರೆ ಆಗ ಕಿಡ್ನಿ ಕಲ್ಲುಗಳು ಕೂಡ ನಿವಾರಣೆ ಆಗುವುದು.
ಕಿಡ್ನಿಯಲ್ಲಿ ಕ್ಯಾಲ್ಸಿಯಂ ಆಕ್ಸಲೇಟ್ ನಿರ್ಮಾಣವಾಗುವುದನ್ನು ತಡೆಯುವುದು.

ಹೃದಯವನ್ನು ರಕ್ಷಿಸುವುದು

ತುಳಸಿ ಎಲೆಗಳಲ್ಲಿ ಇರುವಂತಹ ಯುಜೆನಾಲ್ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಸರಿಯಾಗಿಟ್ಟು ಹೃದಯವನ್ನು ರಕ್ಷಿಸುವುದು.
ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವಿಸಿದರೆ ಅದು ಕಾಯಿಲೆಗಳಿಂದ ಹೃದಯವನ್ನು ರಕ್ಷಣೆ ಮಾಡುವುದು.

ಕ್ಯಾನ್ಸರ್ ಅಪಾಯ ತಗ್ಗಿಸುವುದು

ತುಳಸಿ ಎಲೆಗಳಲ್ಲಿ ಕ್ಯಾನ್ಸರ್ ವಿರೋಧಿ ಮತ್ತು ಆ್ಯಂಟಿಆಕ್ಸಿಡೆಂಟ್ ಗುಣಗಳು ಇವೆ. ಈ ಅಂಶಗಳು ಬಾಯಿ ಮತ್ತು ಸ್ತನ ಕ್ಯಾನ್ಸರ್ ಬೆಳವಣಿಗೆ ಆಗದಂತೆ ತಡೆಯುವುದು. ಗಡ್ಡೆಗಳಿಗೆ ರಕ್ತ ಸರಬರಾಜು ಆಗುವುದನ್ನು ರಕ್ತನಾಳಗಳಿಗೆ ಕಡಿಮೆ ರಕ್ತ ಪೂರೈಕೆ ಮಾಡುವ ಮೂಲಕ ತಡೆಯುವುದು.

ಹೊಟ್ಟೆಯ ಸಮಸ್ಯೆ ನಿವಾರಣೆ

ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯನ್ನು ತುಳಸಿ ನಿವಾರಣೆ ಮಾಡುವುದು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವಿಸಿದರೆ ಅದರಿಂದ ಹೊಟ್ಟೆಯ ಅಸಿಡಿಟಿ, ಮಲಬದ್ಧತೆ ಇತ್ಯಾದಿಗಳನ್ನು ನಿವಾರಣೆ ಮಾಡುವುದು.

Check Out for More Related Articles Below:

  1. ಹಣೆಯ ಮೇಲೆ ನಾವು ಕುಂಕುಮ , ವಿಭೂತಿ ,ಗಂಧ , ಕೆಂಪುನಾಮ ಇವನ್ನು ಧರಿಸುತ್ತೇವೆ ಏಕೆ?
  2. ನಿತ್ಯ ಜೀವನ ಉಪಯೋಗಿ ಅಮೃತ ಸೂಕ್ತಿಗಳು?
  3. ವಿಭೂತಿ ಅಥವಾ ಭಸ್ಮ ಧರಿಸುವ ಉದ್ದೇಶವೇನು?
  4. ಮುಖ್ಯ ನಾಗದೇವತೆಗಳು ಯಾರು?
  5. ನೆಲ್ಲಿಕಾಹಿ ಶರಬತ್ತು ಮಾಡಿಕೊಂಡು ಬೆಳ್ಳಿಗೆ ಮತ್ತು ರಾತ್ರಿ ಸೇವಿಸುವುದರಿಂದ ಏನು ಲಾಭ?

Add Comment

Your email address will not be published. Required fields are marked *