ಗಾಯತ್ರಿ ಮಂತ್ರ ಪಠಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ನಾಲ್ಕು ವೇದಗಳನ್ನು ಒಳಗೊಂಡಿರುವ ಗಾಯತ್ರಿ ಮಂತ್ರವು ಅತ್ಯಂತ ಪವಿತ್ರವಾದದ್ದು. ಗಾಯತ್ರಿ ಮಂತ್ರವನ್ನು ಪಠಿಸುವುದರಿಂದ ಅನೇಕ ಆಧ್ಯಾತ್ಮಿಕ ಹಾಗೂ ಆರೋಗ್ಯಕರ ಪ್ರಯೋಜನಗಳೂ ಇವೆ. ಆದರೆ ಗಾಯತ್ರಿ ಮಂತ್ರವನ್ನು ಪಠಿಸುವಾಗ ಕೆಲವೊಂದು ನಿಯಮಗಳನ್ನೂ ಮನಸ್ಸಿನ್ಲಲಿಟ್ಟುಕೊಳ್ಳಬೇಕಾಗುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿ ಈ ಲೇಖನದಲ್ಲಿದೆ.

ಹಿಂದೂ ಧರ್ಮದಲ್ಲಿ ವೇದ ಮತ್ತು ಪುರಾಣಗಳಿಗೆ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಹಿಂದೂ ಗ್ರಂಥಗಳನ್ನು ಒಮ್ಮೆ ತಿರುವಿದರೆ ನಮಗೆ ಹೆಚ್ಚಾಗಿ ಕಾಣುವ ಮಂತ್ರವೆಂದರೆ ಅದು ಗಾಯತ್ರಿ ಮಂತ್ರ. ಈ ಮಂತ್ರವನ್ನು ‘ಸಾವಿತ್ರಿ ಮಂತ್ರ’ ಎಂದೂ ಕರೆಯಲಾಗುತ್ತದೆ. ಇದು ಅತ್ಯಂತ ಪ್ರಭಾವಶಾಲಿ ಮಂತ್ರವಾಗಿದೆ.

gayatri mantra 7123

ಗಾಯತ್ರಿ ಮಂತ್ರದ ಪ್ರಯೋಜನಗಳು
*ಇದು ನಮ್ಮ ಕಂಠಪಾಠ ಸಾಮರ್ಥ್ಯ ಮತ್ತು ಕಲಿಕೆಯ ಶಕ್ತಿಯನ್ನು ಹೆಚ್ಚಿಸುತ್ತದೆ.
*ಮನಸ್ಸನ್ನು ಕೇಂದ್ರೀಕರಿಸುವಲ್ಲಿ ಸಹಾಯಕವಾಗಿದೆಯೆಂದು ಸಾಬೀತಾಗಿದೆ.
*ಪ್ರಕ್ಷುಬ್ಧ ಮನಸ್ಸನ್ನು ಶಾಂತಗೊಳಿಸುತ್ತದೆ.
*ಆಧ್ಯಾತ್ಮಿಕತೆಯ ಹಾದಿಯತ್ತ ಸಾಗಲು ಇದು ಮೊದಲ ಹೆಜ್ಜೆ.
*ಇದು ಭಕ್ತನನ್ನು ಎಲ್ಲಾ ಜೀವನದ ಅಡೆತಡೆಗಳಿಂದ ರಕ್ಷಿಸಿ, ಅಂತಃಪ್ರಜ್ಞೆಯಿಂದ ದೈವಿಕ ಕಡೆಗೆ ಮಾರ್ಗದರ್ಶನ ನೀಡುತ್ತದೆ.
*ಮಾನಸಿಕ ಶಾಂತಿ, ಮತ್ತು ಸಂತೋಷವನ್ನು ಕೊಡುತ್ತದೆ.
*ಮುಖದ ಮೇಲೆ ಹೊಳಪು ತಂದು, ಉತ್ತಮ ಇಂದ್ರಿಯಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.
*ಕೋಪ ಕಡಿಮೆ ಮಾಡಿ ಬುದ್ಧಿವಂತಿಕೆಯನ್ನು ಹೆಚ್ಚಿಸುತ್ತದೆ.

ಪೂಜೆ ಮಾಡುವಾಗ ಈ ರೀತಿ ಕುಳಿತುಕೊಳ್ಳಬೇಕು
ಪೂಜೆ ಮಾಡುವಾಗ ನೀವು ಪೂರ್ವದಿಕ್ಕಿಗೆ ಕುಳಿತುಕೊಳ್ಳಬೇಕು. ಘಂಟೆ, ಧೂಪ, ಶಂಖ, ನೀರಿರುವ ಪಂಚಪಾತ್ರೆಯನ್ನು ಹಾಗೂ ಪೂಜಾ ಸಾಮಾಗ್ರಿಗಳನ್ನು ನಿಮ್ಮ ಎಡಭಾಗದಲ್ಲಿ ಇಟ್ಟುಕೊಳ್ಳಿ. ಈ ರೀತಿಯಾಗಿ ಪೂಜೆ ಮಾಡುವುದರಿಂದ ಪೂಜೆಯ ಫಲವನ್ನು ಪಡೆಯುವಿರಿ. ಇನ್ನೊಂದು ಮುಖ್ಯವಾದ ಅಂಶವೆಂದರೆ ಪೂಜೆ ಮಾಡುವಾಗ ಹಣೆಗೆ ತಿಲಕವನ್ನು ಕಡ್ಡಾಯವಾಗಿ ಹಚ್ಚಿಕೊಂಡಿರಬೇಕು.

Add Comment

Your email address will not be published. Required fields are marked *