ದೀಪ ಬೆಳಗುವಾಗ ಯಾವ ವಿಚಾರಗಳನ್ನು  ಗಮನದಲ್ಲಿಟ್ಟುಕೊಳ್ಳಬೇಕು.

ದೀಪ ಬೆಳಗುವಾಗ ಕೆಲವೊಂದು ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾದ್ದು ಮುಖ್ಯ. ದೀಪ ಯಾವಾಗಲೂ ಸೂರ್ಯ ಯಾವ ದಿಕ್ಕಿಗೆ ಇರುತ್ತಾನೋ ಆ ದಿಕ್ಕಿಗೆ ಇರುವಂತೆ ಇಟ್ಟು ನಮಸ್ಕರಿಸಬೇಕು.

ಹೀಗಾಗಿ ಬೆಳಗ್ಗಿನ ಹೊತ್ತು ದೀಪ ಉರಿಸುವಾಗ ಪೂರ್ವಾಭಿಮುಖವಾಗಿ, ಸಂಜೆ ಹೊತ್ತು ಪಶ್ಚಿಮಾಭಿಮುಖವಾಗಿ ಇದ್ದರೆ ಶ್ರೇಯಸ್ಸು.

ಶುಕ್ರವಾರ ದೇವಿಯ ವಾರ ಎಂಬುದು ನಂಬಿಕೆ. ಈ ದಿನ ಪೂಜೆ ಸಾಮಾನುಗಳನ್ನು ತೊಳೆಯುವುದರಿಂದ ಮನೆಯಲ್ಲಿ ಲಕ್ಷ್ಮೀ ದೇವಿ ಹೊರಟು ಹೋಗುತ್ತಾಳೆ ಎಂಬ ನಂಬಿಕೆಯಿದೆ. ಹೀಗಾಗಿ ಶುಕ್ರವಾರ, ಅದೇ ರೀತಿ ಮಂಗಳವಾರವೂ ಪೂಜಾ ಸಾಮಾನುಗಳನ್ನು ತೊಳೆಯುವುದು ಅಷ್ಟು ಒಳ್ಳೆಯದಲ್ಲ.

ಗುರುವಾರ ಪೂಜಾ ಸಾಮಗ್ರಿಗಗಳನ್ನು ತೊಳೆದುಕೊಳ್ಳಲು ಅಡ್ಡಿಯಿಲ್ಲ. ಗುರುವಾರ ಪೂಜಾ ಸಾಮಗ್ರಿಗಳನ್ನು ಶುಚಿಗೊಳಿಸಿಟ್ಟುಕೊಂಡು ಶುಕ್ರವಾರ ಭಕ್ತಿಯಿಂದ ಪೂಜೆ ಮಾಡಿದರೆ ಉತ್ತಮ.

ಕಮಲ ಹೂ ಎಂದರೆ ಲಕ್ಷ್ಮೀಗೆ ಪ್ರಿಯವಂತೆ. ಹಾಗಾಗಿ ದೇವಿಯ ಆರಾಧನೆ ಮಾಡುವಾಗ ಕಮಲದ ಹೂವಿಟ್ಟು ಪೂಜೆ ಮಾಡುವುದನ್ನು ಮರೆಯಬೇಡಿ.

ಅದೇ ರೀತಿ ದೇವಿಗೆ ನೈವೇದ್ಯವಾಗಿ  ಅನ್ನ, ಯಾವುದಾದರೊಂದು ಬೇಳೆ ಕಾಳಿನಿಂದ ತಯಾರಿಸಿದ ಆಹಾರ, ಬೆಲ್ಲ ಹಾಕಿ ಮಾಡಿದ ಅಕ್ಕಿ ಪಾಯಸ, ಕಜ್ಜಾಯ ನೀಡಿದರೆ ದೇವಿ ಪ್ರಸನ್ನಳಾಗುತ್ತಾಳೆ ಎಂಬ ನಂಬಿಕೆಯಿದೆ. ಹೀಗಾಗಿ ಲಕ್ಷ್ಮೀ ದೇವಿಗೆ ನೈವೇದ್ಯ ನೀಡುವಾಗ ಈ ಆಹಾರ ವಸ್ತುಗಳು ಇರುವಂತೆ ನೋಡಿಕೊಳ್ಳಿ.

ಸಾಮಾನ್ಯವಾಗಿ ಅಂಗಡಿಗಳಲ್ಲಿ ಸಿಗುವ ದೀಪದ ಎಣ್ಣೆಯನ್ನು ಬಳಸಿ ದೀಪ ಉರಿಸುತ್ತೇವೆ. ಇಲ್ಲವೇ ವಿಶೇಷ ಸಂದರ್ಭಗಳಲ್ಲಿ ತುಪ್ಪದ ದೀಪ ಹಚ್ಚುತ್ತೇವೆ. ಆದರೆ ಯಾವ ಎಣ್ಣೆ ಬಳಸಿದರೆ ಮನೆಯಲ್ಲಿ ಸಮೃದ್ಧಿಯಾಗುತ್ತದೆ?

ದೇವರ ದೀಪಕ್ಕೆ ಶ್ರೀಗಂಧದ ಎಣ್ಣೆ ಬಳಸಿದರೆ ಆ ಮನೆಯಲ್ಲಿ ಸುಖ, ಶಾಂತಿ, ಸಂತೋಷ ನೆಲೆಸಿರುತ್ತದೆ ಎಂಬ ನಂಬಿಕೆಯಿದೆ. ಈ ರೀತಿ ಮಾಡುವುದರಿಂದ ಕಲಹ, ವೈಮನಸ್ಯ ದೂರವಾಗಿ ಆ ಮನೆಯಲ್ಲಿ ಧನಾತ್ಮಕ ಪ್ರಭಾವ ಹೆಚ್ಚುತ್ತದೆ. ಹಾಗಾಗಿ ದೇವರ ದೀಪಕ್ಕೆ ಸ್ವಲ್ಪ ಶ್ರೀಗಂಧದ ಎಣ್ಣೆಯನ್ನು ಬಳಸಿ.

ಹೆಚ್ಚಿನವರು ಇದೇ ತಪ್ಪನ್ನು ಮಾಡುತ್ತಾರೆ. ದೇವಾಲಯಗಳಿಗೆ ಹೋದರೆ ಬರುವಾಗ ದಾರಿಯಲ್ಲಿ ಸಿಗುವ ನೆಂಟರು, ಆಪ್ತರ ಮನೆಗೆ ಒಮ್ಮೆ ಭೇಟಿ ನೀಡಿ ಬರುವುದು ನಮ್ಮಲ್ಲಿ ಎಲ್ಲರೂ ಮಾಡುವ ಕೆಲಸ.

ಇದರಿಂದ ಸಮಯವೂ ಉಳಿತಾಯ, ಎರಡೂ ಕೆಲಸ ಜತೆಗೇ ಆಯ್ತಲ್ಲಾ ಎನ್ನುವ ಲೆಕ್ಕಾಚಾರ. ಆದರೆ ಇದು ತಪ್ಪು. ನಾವು ದೇವಾಲಯಕ್ಕೆ ಭೇಟಿ ನೀಡಿದ ಬಳಿಕ ಬೇರೆಯವರ ಮನೆಗೆ ಭೇಟಿ ನೀಡಬಾರದು.

Add Comment

Your email address will not be published. Required fields are marked *