ಪ್ರತಿ ನಿತ್ಯ ಸಂಜೆ ಅಥವಾ ಬೆಳಿಗ್ಗೆ ದೇವರಿಗೆ ಕೈ ಮುಗಿದು ನಮ್ಮ ಕೆಲಸಗಳಿಗೆ ತೆರಳುವ ಪದ್ಧತಿ ನಮ್ಮೆಲ್ಲರಿಗೂ ಇರುತ್ತದೆ. ಆದರೆ ಹೀಗೆ ದೇವರಿಗೆ ಕೈ ಮುಗಿಯುವ ಮೊದಲು ಕೆಲವೊಂದು ವಿಚಾರಗಳು ನೆನಪಿರಲಿ.

ದೇವರಿಗೆ ಕೈ ಮುಗಿಯುವಾಗ ಸರಿಯಾದ ರೀತಿಯಲ್ಲಿ ಕೈ ಮುಗಿಯದೇ ಇದ್ದರೆ ಅದರ ಫಲ ನಮಗೆ ದೊರೆಯದು. ದೇವರಿಗೆ ಕೈ ಮುಗಿಯುವಾಗ ನಮ್ಮ ಮನಸ್ಸು, ದೇಹ ಎಲ್ಲವೂ ಸ್ಥಿರವಾಗಿರಬೇಕು ಮತ್ತು ಚಂಚಲವಾಗಬಾರದು. ಕೆಟ್ಟ ಆಲೋಚನೆ ಮಾಡುತ್ತಿರುವುದು, ಬೇರೆಯವರಿಗೆ ಕೆಡುಕು ಬಯಸುತ್ತಾ ಪ್ರಾರ್ಥನೆ ಮಾಡಿದರೆ ಅದರ ಫಲ ನಮಗೆ ದೊರೆಯದು.

ದೇವರಿಗೆ ಕೈ ಮುಗಿಯುವಾಗ ನಮ್ಮ ಕೈ ಹಣೆಯ ಭಾಗಕ್ಕೆ ನೇರವಾಗಿರಬೇಕು. ಎರಡೂ ಕೈಗಳ ಬೆರಳುಗಳ ನಡುವೆ ಕಿಂಡಿ ಇರಬಾರದು. ನೇರವಾಗಿ ಕೈ ಹಿಡಿದು ಭಕ್ತಿಯಿಂದ ದೇವರ ಧ್ಯಾನ ಮಾಡಿದರೆ ಮಾತ್ರ ಅದರ ಫಲ ನಮಗೆ ಪ್ರಾಪ್ತಿಯಾಗುವುದು.

Add Comment

Your email address will not be published. Required fields are marked *