ಬೇಗನೇ ಮಕ್ಕಳನ್ನು ಪಡೆಯಲು ಬಯಸುವ ದಂಪತಿ ಸುಬ್ರಹ್ಮಣ್ಯನ ಆರಾಧನೆ ಮಾಡಬೇಕು. ಅದೂ ಪ್ರತೀ ತಿಂಗಳು ಷಷ್ಠಿಯಂದು ಉಪವಾಸ ವ್ರತ ಕೈಗೊಂಡು ಸುಬ್ರಹ್ಮಣ್ಯನ ಆರಾಧನೆ ಮಾಡಿದರೆ ಒಳಿತಾಗುವುದು.
ಷಷ್ಠಿ ದಿನ ಬೆಳಿಗ್ಗೆ ಬೇಗನೇ ಎದ್ದು ದಂಪತಿ ತಲೆ ಸ್ನಾನ ಮಾಡಿಕೊಂಡು ಬೆಳಿಗ್ಗೆಯೇ ಸುಬ್ರಹ್ಮಣ್ಯನ ಫೋಟೋ ಅಥವಾ ವಿಗ್ರಹವಿದ್ದರೆ ಅದನ್ನು ದೀಪ-ಧೂಪ, ಹೂವು ಹಣ್ಣುಗಳಿಂದ ಅಲಂಕರಿಸಿ ಭಕ್ತಿಯಿಂದ ಪೂಜೆ ಸಲ್ಲಿಸಿ ನೈವೇದ್ಯ ಮಾಡಬೇಕು. ಒಂದು ವೇಳೆ ಮನೆಯಲ್ಲಿ ಸಾಧ್ಯವಾಗದೇ ಇದ್ದರೆ ಪಕ್ಕದಲ್ಲಿರುವ ಸುಬ್ರಹ್ಮಣ್ಯ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ, ಅಲ್ಲಿ ಸಿಗುವ ಪ್ರಸಾದ ಮಾತ್ರ ಸೇವಿಸಿ ಆ ದಿನ ವ್ರತ ಮಾಡಿದರೆ ಒಳಿತಾಗುತ್ತದೆ.
Add Comment