ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಿಸಲು ಓದುವ ಕೊಠಡಿಯ ವಾಸ್ತು ಹೇಗಿರಬೇಕು ಗೊತ್ತಾ?

ಆಗ್ನೇಯ ದಿಕ್ಕಿನಲ್ಲಿ ಅಂದರೆ ಪೂರ್ವ ಮತ್ತು ದಕ್ಷಿಣ ದಿಕ್ಕುಗಳ ಮಧ್ಯದಲ್ಲಿ ಅಡುಗೆ ಮನೆ ಇರಬೇಕು.ಈ ದಿಕ್ಕಿನಲ್ಲಿ ಶೌಚಾಲಯವಿದ್ದರೆ ಮನೆಯ ಸದಸ್ಯರು ತುಂಬಾ ಕಷ್ಟ ಅನುಭವಿಸುತ್ತಾರೆ. ಆದಾಯಕ್ಕೆ ಮೀರಿದ ಖರ್ಚು, ಸಾಲ, ಗಂಡು ಸಂತಾನದ ನಾಶ ಮುಂತಾದ ಸಂಕಷ್ಟಗಳು ಬರುತ್ತವೆ. ದಕ್ಷಿಣ ದಿಕ್ಕಿನಲ್ಲಿ ಬಾವಿ ಇರಬಾರದು. ಇದ್ದರೆ ಮನೆಯ ಹೆಣ್ಣು ಮಕ್ಕಳ ಮೇಲೆ ದುಷ್ಪರಿಣಾಮವಾಗುತ್ತದೆ. ಈ ದಿಕ್ಕಿನಲ್ಲಿ ಶಯನಗೃಹ ಇದ್ದರೆ ಒಳ್ಳೆಯದು.

study room

ಈಶಾನ್ಯ ದಿಕ್ಕಿಗಿರುವಷ್ಟೇ ಪ್ರಮುಖ ಸ್ಥಾನ ನೈಋುತ್ಯ ದಿಕ್ಕಿಗೂ ಇದೆ. ಈ ಭಾಗವು ಎತ್ತರವಾಗಿರಬೇಕು. ಈ ದಿಕ್ಕಿನಲ್ಲೂ ಶಯನಗೃಹವಿರಬಹುದು. ಈಶಾನ್ಯ ದಿಕ್ಕಿನಲ್ಲಿ ದುಡ್ಡು, ಸಂಪತ್ತು ಹಾಗೂ ಒಡವೆಗಳನ್ನು ಇಡುವ ಕಪಾಟನ್ನು ಉತ್ತರಾಭಿಮುಖವಾಗಿಟ್ಟರೆ ಸಂಪತ್ತು ಇನ್ನೂ ವೃದ್ಧಿಯಾಗುತ್ತದೆ. ಪಶ್ಚಿಮ ದಿಕ್ಕಿನಲ್ಲಿ ಸ್ಟೋರ್‌, ಶೌಚಾಲಯ ನಿರ್ಮಿಸಬೇಕು. ಈ ಭಾಗದಲ್ಲಿ ಗಿಡಗಳನ್ನು ನೆಡಬಹುದು. ಈ ದಿಕ್ಕಿನಲ್ಲಿ ದೇವರ ಮನೆ ಅಥವಾ ಅಡುಗೆ ಮನೆ ಇರಬಾರದು.

‘ವಾಯವ್ಯೇ ಪಶುಮಂದಿರಂ ಸ್ಯಾತ್‌’ ಅಂದರೆ ವಾಯವ್ಯ ದಿಕ್ಕಿನಲ್ಲಿ ಪಶುಮಂದಿರವಿರಬೇಕು. ಈಗಿನ ನಗರ ಜೀವನದ ವ್ಯವಸ್ಥೆಯಲ್ಲಿ ಕೊಟ್ಟಿಗೆ ಇಲ್ಲವಾಗಿದೆ. ವಾಯವ್ಯ ಕೋಣೆಯಲ್ಲಿಅಡುಗೆ ಮನೆ ಇರಬಹುದು. ವಾಯವ್ಯ ದಿಕ್ಕಿನ ದೋಷದಿಂದಲೇ ಕೋರ್ಟ್‌ನಲ್ಲಿ ಸೋಲು, ಮಿತ್ರರು ಶತ್ರುಗಳಾಗುವುದು, ಗಂಡಸರು ದುಶ್ಚಟಗಳ ದಾಸರಾಗುವುದು, ಮಹಿಳೆಯರು ಅನಾರೋಗ್ಯ ಪೀಡಿತರಾಗುವ ಸಾಧ್ಯತೆ ಇರುತ್ತದೆ.

Add Comment

Your email address will not be published. Required fields are marked *