ಸಕಲ ಸಂಪತ್ತನ್ನು ದಯಪಾಲಿಸುವ ಲಕ್ಷ್ಮೀದೇವಿಯನ್ನು ಶುಕ್ರವಾರದಂದು ಪೂಜಿಸುವಾಗ ಕೆಲವೊಂದು ವಸ್ತು, ವಿಧಾನಗಳನ್ನು ಅನುಸರಿಸಿದರೆ ನಿಮ್ಮ ಮನೆಯಲ್ಲಿ ಸಂಪತ್ತು, ಸಮೃದ್ಧಿಯು ಸದಾ ನೆಲೆಸುವುದು.
ಅಲಂಕಾರ ಪ್ರಿಯಳಾದ ಲಕ್ಷ್ಮಿ ದೇವಿಗೆ ಪ್ರತಿ ಶುಕ್ರವಾರ ವಿಶೇಷ ಅಲಂಕಾರ, ಹೂವುಗಳ ಅರ್ಪಣೆ, ಮನೆಯಲ್ಲಿ ಶುದ್ಧ ಹಾಗೂ ಶಾಂತತೆ ನೆಲೆಸಿರಬೇಕು. ಪ್ರತಿ ಶುಕ್ರವಾರ ಉಪವಾಸ ಕ್ರಮವನ್ನು ಅನುಸರಿಸಿ ತಾಯಿ ಲಕ್ಷ್ಮಿಯ ಆರಾಧನೆ ಮಾಡಿದರೆ ಆರ್ಥಿಕ ಸ್ಥಿತಿಯು ಸುಲಭವಾಗಿ ಸುಧಾರಣೆಯಾಗುವುದು. ಕೆಲವು ಪುರಾಣ ಹಿನ್ನೆಲೆ ಹಾಗೂ ಧಾರ್ಮಿಕ ಚಿಂತನೆಗಳ ಪ್ರಕಾರ ಕೆಲವು ಕ್ರಮವನ್ನು ಅನುಸರಿಸಿದರೆ ಲಕ್ಷ್ಮಿ ದೇವಿ ಸದಾ ಕಾಲ ನಮ್ಮೊಂದಿಗೆ ಇರುವಳು. ಹಣದ ಸಮಸ್ಯೆಯನ್ನು ನಿವಾರಿಸುವಳು. ಬಡತನ ಎನ್ನುವುದು ನಮ್ಮೆಡೆಗೆ ಸುಳಿಯದಂತೆ ನೋಡುವಳು ಎಂದು ಹೇಳಲಾಗುವುದು. ಹಾಗಾದರೆ ಆ ಪವಿತ್ರ ಕ್ರಮಗಳು ಯಾವವು? ಎನ್ನುವುದನ್ನು ಪರಿಶೀಲಿಸಿ.
ದಾನ ಮಾಡಿ
ಯಾವುದೇ ದೇವರನ್ನು ಮೆಚ್ಚಿಸಬೇಕು ಅಥವಾ ಅವರ ಆಶೀರ್ವಾದ ಪಡೆಯಬೇಕು ಎಂದಾದರೆ ಕೇವಲ ಪ್ರಾರ್ಥನೆ ಹಾಗೂ ಪೂಜೆಯನ್ನು ಸಲ್ಲಿಸಿದರೆ ಸಾಲದು. ಬದಲಿಗೆ ದಾನ ಧರ್ಮಗಳನ್ನು ಮಾಡಬೇಕು. ಶುಕ್ರವಾರದಂದು ಅಗರಬತ್ತಿ ಮತ್ತು ಧೂಪ ದ್ರವ್ಯಗಳನ್ನು ದಾನ ಮಾಡಬೇಕು. ಅದರಿಂದ ಮನೆಯಲ್ಲಿ ಶಾಂತಿ ಮತ್ತು ಸಮೃದ್ಧಿಯು ನೆಲೆಸುವುದು. ಶುಕ್ರ ವಾರದಂದು ದೇವಲಾಯಕ್ಕೆ ಪೂಜೆಸಲ್ಲಿಸುವುದು ಹಾಗೂ ಧೂಪ ದ್ರವ್ಯಗಳನ್ನು ಅರ್ಪಿಸುವುದರಿಂದ ಪುಣ್ಯ ಪ್ರಾಪ್ತಿಯಾಗುವುದು
Add Comment