ಮನೆಯ ತುಳಸಿ ಗಿಡವು ಒಣಗಿದ್ದರೆ ಯಾವುದರ ಸಂಕೇತ ಗೊತ್ತಾ?

ಮನೆಯ ತುಳಸಿ ಗಿಡವು ಒಣಗಿದ್ದರೆ ಯಾವುದರ ಸಂಕೇತ ಗೊತ್ತಾ?

ಪವಿತ್ರವಾದ ತುಳಸಿಯನ್ನು ಧಾರ್ಮಿಕ ಪೂಜಾಕಾರ್ಯಗಳಿಗೂ ಬಳಸಲಾಗುತ್ತದೆ, ವಿಶೇಷವಾಗಿ ವಿಷ್ಣು ಪೂಜೆಗಂತೂ ತುಳಸಿ ಬೇಕೇ ಬೇಕು. ತುಳಸಿಯು ಅತ್ಯಂತ ಸೂಕ್ಷ್ಮವಾದ ಗಿಡವಾಗಿದ್ದು, ಮನೆಯಲ್ಲಿ ನಡೆಯುವ ಘಟನೆಗಳಿಗೆ ಮುಂಚಿತವಾಗಿಯೇ ಸುಳಿವನ್ನು ನೀಡುವುದೆಂದು ಹೇಳಲಾಗುತ್ತದೆ.

ಪುರಾತನ ಕಾಲದಿಂದಲೂ ಹಿಂದೂಧರ್ಮದಲ್ಲಿ ತುಳಸಿಯು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಾ ಬಂದಿದೆ. ಶಾಸ್ತ್ರಗಳಲ್ಲೂ ತುಳಸಿಗೆ ಪವಿತ್ರವಾದ ದೇವತಾ ಸ್ಥಾನವನ್ನು ನೀಡಲಾಗಿದೆ ಜೊತೆಗೆ ಮನೆಯಲ್ಲಿ ತುಳಸಿ ಇದ್ದರೆ ಮನೆಗೆ ಶುಭವೆಂದು ಹೇಳಲಾಗುತ್ತದೆ. ಲಕ್ಷ್ಮೀ ದೇವಿಯ ಸಹೋದರಿಯೆಂದು ಕರೆಯಲ್ಪಡುವ ತುಳಸಿಯು ವಿಷ್ಣುವಿಗೆ ಅತ್ಯಂತ ಪ್ರಿಯವೂ.

ತುಳಸಿ ವಿಪತ್ತನ್ನು ಹೇಗೆ ಸೂಚಿಸುತ್ತದೆ ಗೊತ್ತಾ?

ವಿಪತ್ತು ಕಾಣಿಸಿಕೊಳ್ಳುವ ಮನೆಯಲ್ಲಿ ಸಾಕಷ್ಟು ಕಾಳಜಿಯನ್ನು ಮಾಡಿದರೂ ತುಳಸಿಯು ಒಣಗಲಾರಂಭಿಸುತ್ತದೆ. ಎಷ್ಟೇ ನೀರು ಹಾಕಿದರೂ ತುಳಸಿ ಗಿಡವು ಬೆಳೆಯದಿದ್ದಲ್ಲಿ, ಎಲೆಗಳು ನಿರಂತರವಾಗಿ ಉದುರುತ್ತಿದ್ದರೆ ಹಾಗೂ ಒಣಗಿದರೆ ಶಕುನ ಶಾಸ್ತ್ರದ ಪ್ರಕಾರ ಮನೆಯಲ್ಲಿ ಅಹಿತಕರ ಘಟನೆಗಳು ನಡೆಯುವ ಮುನ್ಸೂಚನೆಯಾಗಿದೆ. ಇಂತಹ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ನಿಭಾಯಿಸಬೇಕಾಗುತ್ತದೆ. ನಿಮ್ಮ ಮನೆಯ ಸದಸ್ಯರ ನಡವಳಿಕೆಗಳು ಉತ್ತಮವಾಗಿರಲಿ.

ಒಣಗಿರುವ ತುಳಸಿಯ ಅರ್ಥ

ಎಲ್ಲಿ ಬಡತನ, ಅಶಾಂತಿ ಹಾಗೂ ಕ್ಲೇಶಗಳು ತುಂಬಿರುತ್ತದೋ ಅಂತಹ ಮನೆಯಲ್ಲಿ ಲಕ್ಷ್ಮೀದೇವಿಯು ನೆಲೆಸುವುದಿಲ್ಲವೆಂದು ಹೇಳಲಾಗುತ್ತದೆ. ಮನೆಯಲ್ಲಿ ವಿಪತ್ತು ಸಂಭವಿಸಿದಾಗ ಈ ಎಲ್ಲಾ ಲಕ್ಷಣಗಳು ನಿಧಾನವಾಗಿ ಗೋಚರಿಸುತ್ತದೆ. ಇದರಿಂದಾಗಿಯೇ ಲಕ್ಷ್ಮೀಯು ಆ ಸ್ಥಳವನ್ನು ತೊರೆಯುತ್ತಾಳೆ. ಜ್ಯೋತಿಷ್ಯಶಾಸ್ತ್ರದಲ್ಲಿ ಬುಧವು ಹಸಿರು ಬಣ್ಣದ ಅಧಿಪತಿ ಹಾಗೂ ಈ ಗ್ರಹವು ಮರಗಳನ್ನು ಹಾಗೂ ಸಸ್ಯಗಳಿಗೆ ಕಾರಣವಾಗುವ ಗ್ರಹವೂ ಹೌದು. ಹಾಗಾಗಿ ಬುಧನು ದೋಷಪೂರಿತವಾಗಿದ್ದರೆ ಅದರ ಪರಿಣಾಮವು ಜನರಿಗೆ ಅಶುಭ ಫಲಿತಾಂಶವನ್ನು ತರುವುದು. ಬುಧನ ದೋಷವು ಗಿಡಗಳ ಮೂಲಕವೂ ವ್ಯಕ್ತವಾಗುವುದು.

Check Out For More Related Artical

  • ಹಣೆಯ ಮೇಲೆ ನಾವು ಕುಂಕುಮ, ವಿಭೂತಿ, ಗಂಧ, ಕೆಂಪುನಾಮ ಇವನ್ನು ಧರಿಸುತ್ತೇವೆ ಏಕೆ?
  • ನಿತ್ಯ ಜೀವನ ಉಪಯೋಗಿ ಅಮೃತ ಸೂಕ್ತಿಗಳು
  • ವಿಭೂತಿ ಅಥವಾ ಭಸ್ಮ ಧರಿಸುವ ಉದ್ದೇಶವೇನು?
  • ಮುಖ್ಯ ನಾಗದೇವತೆಗಳು ಯಾರು?
  • ನೆಲ್ಲಿಕಾಹಿ ಶರಬತ್ತು ಮಾಡಿಕೊಂಡು ಬೆಳ್ಳಿಗೆ ಮತ್ತು ರಾತ್ರಿ ಸೇವಿಸುವುದರಿಂದ ಏನು ಲಾಭ?

Add Comment

Your email address will not be published. Required fields are marked *