ಮಲಗುವ ಕೋಣೆಯ ವಾಸ್ತು ಹೇಗಿರಬೇಕು??

ಮನೆಯ ಉತ್ತರ ದಿಕ್ಕಿನಲ್ಲಿ ಬೆಡ್ ರೂಂ ಇರುವುದು ಪ್ರಶಸ್ತ ಎಂದು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಹಾಗೆಯೇ ಆಗ್ನೇಯ ಹಾಗೂ ಈಶಾನ್ಯ ದಿಕ್ಕಿನಲ್ಲಿ ಬೆಡ್ ರೂಂ ಇರುವುದು ಅಶುಭ. ಮಕ್ಕಳು ಹಾಗೂ ಇನ್ನೂ ಮದುವೆ ಆಗದವರು ಬೇಕಾದರೆ ಪೂರ್ವ ದಿಕ್ಕಿನಲ್ಲಿ ತಮ್ಮ ಕೋಣೆ ಹೊಂದಬಹುದು. ಕೋಣೆಯ ಮಧ್ಯಭಾಗದಲ್ಲಿ ಮಂಚ ಅಳವಡಿಸುವುದು ಸೂಕ್ತವಲ್ಲ. ತಿಳಿ ಗುಲಾಬಿ, ನೀಲಿ ಹಾಗೂ ಹಸಿರು ವರ್ಣವನ್ನು ಗೋಡೆಗಳಿಗೆ ಬಳಸಬಹುದು. ಕೋಣೆಯ ದಕ್ಷಿಣ, ನೈಋತ್ಯ ಹಾಗೂ ಪಶ್ಚಿಮ ದಿಕ್ಕಿನಲ್ಲಿ ಫರ್ನಿಚರ್‌ಗಳನ್ನು ಇಡುವುದು ಸೂಕ್ತವಾಗಿದೆ.

ಹಳೆಯ ಗ್ರಂಥಗಳಲ್ಲಿ ಉಲ್ಲೇಖಿಸಲಾದ ದಶ ದಿಕ್ಕುಗಳು ಆಧ್ಯಾತ್ಮಿಕವಾಗಿ ಮಹತ್ವ ಹೊಂದಿದ್ದು, ಕೆಲ ದಿಕ್ಕುಗಳು ಅನೇಕ ವಿಷಯಗಳಿಗೆ ಮಂಗಳಕರವಾಗಿವೆ. ಅದೇ ರೀತಿ ಇನ್ನು ಕೆಲ ವಿಷಯಗಳ ಸಂದರ್ಭದಲ್ಲಿ ಅಶುಭ ಎಂದು ಪರಿಗಣಿಸಲಾಗುತ್ತದೆ.

ಓರ್ವ ವ್ಯಕ್ತಿಗೆ ಸರಿಹೊಂದುವಂತೆ ವಾಸ್ತು ಶಾಸ್ತ್ರ ಪರಿಗಣಿಸದೆ ಮನೆಯ ವಾಸ್ತು ವಿನ್ಯಾಸ ಮಾಡುವುದರಿಂದ ಆ ಸ್ಥಳದಲ್ಲಿ ಕೆಲ ಬಗೆಯ ಅನಾರೋಗ್ಯಕರ ಹಾಗೂ ಅಹಿತಕರ ವಾತಾವರಣ ನಿರ್ಮಾಣವಾಗುವ ಸಂಭವವಿರುತ್ತದೆ.

ವಾಸ್ತು ಶಾಸ್ತ್ರವನ್ನು ಕಡೆಗಣಿಸಿ ಕಟ್ಟಡ ನಿರ್ಮಿಸುವುದು ವ್ಯಕ್ತಿ ತನಗೆ ತಾನೇ ಕೆಟ್ಟದ್ದನ್ನು ಮಾಡುವ ಪ್ರಕ್ರಿಯೆಯಾಗುತ್ತದೆ. ಹೀಗಾಗಿ ವಾಸ್ತುವಿನ ನಿಯಮಗಳನ್ನು ಕ್ರಮಬದ್ಧವಾಗಿ ಪಾಲಿಸಿ ಜೀವನದಲ್ಲಿ ಶಾಂತಿ ಹಾಗೂ ಆನಂದವನ್ನು ಪಡೆಯಬಹುದಾಗಿದೆ.

Add Comment

Your email address will not be published. Required fields are marked *