ಪಾರ್ವತಿ ಸಮೇತ ಶಿವನ ಆರಾಧನೆ ಮಾಡುವುದರಿಂದ ಬೇಗನೇ ವಿವಾಹವಾಗುತ್ತದೆ. ಶಿವ-ಪಾರ್ವತಿಯರ ಚಿತ್ರದ ಎದುರು ಕಲಶ, ಹೂವು ಹಣ್ಣು, ಫಲ ವಸ್ತುಗಳನ್ನು ಇಟ್ಟು ದೀಪ ಉರಿಸಿ ಅಲಂಕಾರ ಮಾಡಬೇಕು.
ಬಳಿಕ ಗಣೇಶನನ್ನು ಮನಸ್ಸಲ್ಲಿ ಧ್ಯಾನಿಸಿಕೊಂಡು ಶಿವ-ಪಾರ್ವತಿಯರಿಗೆ ಸಂಬಂಧಿಸಿದ ಶ್ಲೋಕ ಅಥವಾ ಮಂತ್ರವನ್ನು 108 ಬಾರಿ ಜಪಿಸಿ ಪೂಜೆ ಮಾಡಿದರೆ ವಿವಾಹ ಭಾಗ್ಯ ಕೂಡಿಬರುವುದು
ಕೆಲವೊಂದು ವಸ್ತುಗಳು ನಮ್ಮ ಮನೆಯಲ್ಲಿದ್ದರೆ ಅದು ನಮಗೆ ಅದೃಷ್ಟ ತರುತ್ತದೆ ಎಂಬ ನಂಬಿಕೆಯಿದೆ. ಅಂತಹದ್ದರಲ್ಲಿ ಆನೆ ಕೂಡಾ ಒಂದು. ಹಾಗಂತ ಆನೆಯನ್ನೇ ತಂದು ಸಾಕಬೇಕು ಎಂದರ್ಥವಲ್ಲ.
ಆನೆಯ ಚಿಕ್ಕ ಮೂರ್ತಿ, ಪ್ರತಿರೂಪವನ್ನು ಮನೆಯಲ್ಲಿಟ್ಟುಕೊಂಡರೆ ಅದು ಅದೃಷ್ಟ ತರುತ್ತದೆ ಎಂಬ ನಂಬಿಕೆಯಿದೆ. ಆನೆ ಸಂಪತ್ತು, ವಿಧೇಯತೆ, ಪ್ರತಿಷ್ಠೆ, ಬೆಳವಣಿಗೆಯ ಸಂಕೇತ. ಹೀಗಾಗಿ ಆನೆಯ ಪುಟ್ಟ ಮೂರ್ತಿಯನ್ನು ಮನೆಯಲ್ಲಿ ತಂದಿಟ್ಟುಕೊಂಡರೆ ಶುಭವಾಗುತ್ತದೆ.
ದೇವರ ಮನೆ ಶುಚಿಯಾಗಿದ್ದಷ್ಟು ಅಲ್ಲಿ ದೇವರ ಸಾನಿಧ್ಯ ಹೆಚ್ಚುವುದಲ್ಲದೆ, ನಮಗೆ, ಮನೆಗೆ ದೇವರ ಆಶೀರ್ವಾದ ಸದಾ ಇರುತ್ತದೆ.
ಆದರೆ ದೇವರ ಮನೆಯಲ್ಲಿ ನಿನ್ನೆ ಇಟ್ಟ ಬಾಡಿದ ಹೂಗಳನ್ನು ಹಾಗೆಯೇ ಬಿಡುವುದು, ಶುದ್ಧ ಬಟ್ಟೆಯಿಂದ ಒರೆಸಿ ಶುಭ್ರವಾಗಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ದೇವರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಅಷ್ಟೇ ಅಲ್ಲ, ಅಂತಹ ಮನೆಯಲ್ಲಿ ದಾರಿದ್ರ್ಯ ಉಂಟಾಗುತ್ತದೆ. ಅಲ್ಲದೆ ಇದು ಮನೆಯಲ್ಲಿ ಋಣಾತ್ಮಕ ವಾತಾವರಣ ಸೃಷ್ಟಿಸುತ್ತದೆ. ಹೀಗಾಗಿ ಪ್ರತಿ ನಿತ್ಯ ದೇವರ ಮನೆಯಲ್ಲಿ ಶುದ್ಧಿಗೊಳಿಸುವುದು ಅಗತ್ಯ.
Add Comment