ವಿದ್ಯಾಭ್ಯಾಸಕ್ಕಾಗಿ ಕೆಲ ವಾಸ್ತು ಉಪಾಯಗಳು ಈ ಕೆಳಗಿನಂತಿವೆ: –
ಅಧ್ಯಯನ ಮಾಡುವಾಗ ಮಗು ಯಾವ ದಿಕ್ಕಿಗೆ ಎದುರಾಗಿ ಕುಳಿತುಕೊಳ್ಳಬೇಕು?
ವಾಸ್ತು ಎಂಬುದು ದಿಕ್ಕುಗಳ ವಿಜ್ಞಾನ, ಇದು ಕೇವಲ ವಸ್ತುಗಳಿಗೆ ಮಾತ್ರ ಅನ್ವಯಿಸದೇ ಜನರಿಗೂ ಅನ್ವಯಿಸುತ್ತದೆ. ಅಧ್ಯಯನದಲ್ಲಿ ಏಕಾಗ್ರತೆಯನ್ನು ಹೆಚ್ಚಿಸಲು ವಿದ್ಯಾರ್ಥಿಯು ಓದುವಾಗ ತನ್ನ 4ನೇ ಅನುಕೂಲಕರ ದಿಕ್ಕಿಗೆ ಎದುರಾಗಿ ಕುಳಿತುಕೊಳ್ಳಬೇಕು.
ನಿಮ್ಮ ಮಗುವಿನ ಅನುಕೂಲಕರ ದಿಕ್ಕು ಯಾವುದು?
ಅಧ್ಯಯನದಲ್ಲಿ ಸರಸ್ವತಿ ಸ್ಥಾನ ಎಷ್ಟು ಮುಖ್ಯವಾದುದು ಎಂಬುದು ನಿಮಗೆ ತಿಳಿದಿದೆಯೇ? ನಿಮ್ಮ ಮನೆಯ ಸರಸ್ವತಿಸ್ಥಾನದಲ್ಲಿ ಯಾವುದೇ ದೋಷವಿದ್ದರೆ ಅದು ಜ್ಞಾನ ಮತ್ತು ವಿದ್ಯಾಭ್ಯಾಸದ ಮೇಲೆ ಪ್ರಭಾವ ಬೀರುತ್ತದೆ. ಬಿಸಿನೆಸ್ ಅಭಿವೃದ್ಧಿಯ ಮೇಲೆ ಹಾಗು ಸಂಪತ್ತಿನ ಸೃಷ್ಟಿಯ ಮೇಲೂ ಇದು ಪರೋಕ್ಷವಾಗಿ ಪ್ರಭಾವ ಬೀರುತ್ತದೆ. ಹೀಗಾಗಿ ಮನೆಯಲ್ಲಿನ ಸರಸ್ವತಿ ಸ್ಥಾನ ವಿಶ್ಲೇಷಿಸಲು ಮತ್ತು ಅಗತ್ಯವಿದ್ದರೆ ದೋಷ ಪರಿಹರಿಸಲು ಕ್ರಮ ತೆಗೆದುಕೊಳ್ಳಲು ಸರಳ ವಾಸ್ತು ತಜ್ಞರು ನಿಮಗೆ ನೆರವಾಗಬಲ್ಲರು.
ನಿಮ್ಮ ಮಗು ಅಧ್ಯಯನ ಮಾಡಲು ಹಾಸಿಗೆಯ ಮೇಲೆ ಕುಳಿತುಕೊಳ್ಳುತ್ತದೆಯೇ ?
ಓದುವಾಗ ಹಾಸಿಗೆಯ ಮೇಲೆ ಕುಳಿತುಕೊಳ್ಳುವುದನ್ನು ತಪ್ಪಿಸಿ, ಏಕೆಂದರೆ ಇದು ಅಧ್ಯಯನದಲ್ಲಿ ಏಕಾಗ್ರತೆಯನ್ನು ಕಡಿಮೆ ಮಾಡುತ್ತದೆ. ಹಾಸಿಗೆಯ ಮೇಲೆ ಕುಳಿತುಕೊಂಡರೆ, ಓದಲು ಅಗತ್ಯವಿರುವ ಏಕಾಗ್ರತೆ ಉಂಟಾಗುವುದಿಲ್ಲ.
Add Comment