ಶನಿ ದೇವರ ಕೃಪೆಯನ್ನು  ಪಡೆಯಲು ಏನನ್ನು  ಮಾಡಬೇಕು?

ಶನಿ ದೇವನ ಒಂದು ಸಾಮಾನ್ಯ ಮಂತ್ರ : ಓಂ ಶಂ ಶನೈಸ್ಕಾರ್ಯಯೇ ನಮಃ ಎಂದು ಜಪಿಸಬೇಕು.
ಕರಿ ಎಳ್ಳನ್ನು ಬ್ರಾಹ್ಮಣರಿಗೆ ದಾನ ಮಾಡಿ.
ಕಪ್ಪು ಹಸುವಿಗೆ ಕರಿ ಎಳ್ಳು , ಬೆಲ್ಲದ ಮಿಶ್ರಣವನ್ನು ತಿನ್ನಿಸಿ.
ಪ್ರತಿದಿನ ಮನೆಯ ಮುಖ್ಯದ್ವಾರದ ಮುಂದೆ ಸೂರ್ಯ ಮುಳುಗಿದ ಮೇಲೆ ಎರಡು ಎಳ್ಳೆಣ್ಣೆಯ ದೀಪಗಳನ್ನು ಹಚ್ಚಿಡಬೇಕು.
ಶನಿವಾರದಂದು ಉಪವಾಸ ಮಾಡಿ. ಬೆಳಗ್ಗೆ ೬ ರಿಂದ ಸಂಜೆ ೬ ರವರೆಗೆ ಶ್ರಾವಣ ಮಾಸದಲ್ಲಿ ಕಡ್ಡಾಯವಾಗಿ ಮಾಡಬೇಕು.
ರಾಮ ನಾಮ, ಹನುಮಾನ್ ಚಾಲೀಸ , ದುರ್ಗಾ ಸ್ತುತಿಯ ಪಠಣ ಮಾಡಿದರೆ ಇನ್ನೂ ಒಳ್ಳೆಯದು.
ಕಾಗೆಗಳಿಗೆ ಬೆಳಗಿನ ಹೊತ್ತಿನಲ್ಲಿ ಆಹಾರ ನೀಡಬೇಕು.
೧೯ ಸುತ್ತು ನವಗ್ರಹ ಪ್ರದಕ್ಷಿಣೆ ಮಾಡಬೇಕು.
ಶನಿಯನ್ನು ಸಂತೃಪ್ತಿಗೊಳಿಸುವ ಉಪಾಯವೆಂದರೆ ಶನಿವಾರದಂದು ನೀಲಿ ಬಣ್ಣದ ಬಟ್ಟೆಯನ್ನು ದಾನ ಮಾಡಬೇಕು ಹಾಗು ಬಡವರಿಗೆ ಸಹಾಯ ಮಾಡಬೇಕು.

ಈ ಲೋಕದ ಸಮಸ್ತ ಜನರಿಗೆ ಶನಿಕಾಟ ತಪ್ಪಿದ್ದಲ್ಲ ಎಂಬುದು ನಿಶ್ಚಿತವಾದ ಮಾತು. ಪ್ರತಿಯೊಬ್ಬರಿಗೂ ತನ್ನ ಜೀವಿತಾವಧಿಯಲ್ಲಿ ಸಾಡೇಸಾತನ್ನು ಅನುಭವಿಸಲೇ ಬೇಕಾಗುತ್ತದೆ. ಸಾಡೇಸಾತಿ ಎಂದರೇನೇ ಎಷ್ಟೋ ಜನ ಭಯ ಬೀಳುತ್ತಾರೆ. ಸಾಡೇಸಾತಿ ಕಾದಾಟದಲ್ಲಿ ಅವರು ಅನುಭವಿಸಿದ ಕಷ್ಟಗಳನ್ನು ಕೇಳಿದರೇನೇ ಮೈ ನಡುಕ ಬರುತ್ತದೆ. ಹನ್ನೆರಡು ರಾಶಿಗಳಲ್ಲೂ ಸಂಚರಿಸುವ ಶನಿಯು ಒಂದು ರಾಶಿಯಲ್ಲಿ ಎರಡೂವರೆ ವರ್ಷವಿರುತ್ತಾನೆ.

ಶನಿಯು ಕರ್ಮಕ್ಕನುಗುಣವಾಗಿಯೇ ಫಲ ಕೊಡುತ್ತಾನೆ. ನಿಮ್ಮ ಉತ್ತಮ ಸಮಯದಲ್ಲಿ ಒಳ್ಳೆಯ ಕೆಲಸ ಮಾಡಿದ್ದಾದರೆ ಶನಿಯು ಹೆಚ್ಚಿನ ಕಾಟ ಕೊಡುವುದಿಲ್ಲ. ಆದರೆ ನಿಮ್ಮ ಉತ್ತಮ ಸಮಯದಲ್ಲಿ ದಬ್ಬಾಳಿಕೆ, ಅನ್ಯಾಯ, ಅಕ್ರಮ, ಅನೀತಿ, ಅಧರ್ಮದ ಕೆಲಸಗಳು ಮತ್ತಿತರ ದುಷ್ಟತನದ ಕೆಲಸಗಳನ್ನು ಮಾಡಿದ್ದರೆ ನೀವು ಮಾಡಿದ್ದೆಲ್ಲವನ್ನೂ ನಿಮಗೆ ತನ್ನ ಶನಿ ಸಾಡೇಸಾತಿಯಲ್ಲಿ ಮರಳಿ ನೀಡುತ್ತಾನೆ.

ಹೆದರಬೇಕಾಗಿಲ್ಲ. ಶನಿಯ ಕೆಟ್ಟ ಪ್ರಭಾವದಿಂದ ದೂರವಾಗಲು, ಹಾಗೂ ಒಳ್ಳೆಯ ಫಲ ಪಡೆಯಲು ಶನಿದೇವರ ಪೂಜಿಸಿ ಅನುಗ್ರಹ ಪಡೆದುಕೊಳ್ಳಬಹುದು. ಹಾಗೂ ಒಳ್ಳೆಯ ಕರ್ಮಗಳನ್ನು ಮಾಡುತ್ತಿದ್ದರೆ ಸಾಡೇಸಾತು ಮುಗಿಯುವ ಹೊತ್ತಿಗೆ ಶನಿಯು ಒಳ್ಳೆಯ ಫಲ ನೀಡುತ್ತಾನೆ ಎಂಬ ಪ್ರತೀತಿಯಿದೆ

Add Comment

Your email address will not be published. Required fields are marked *