ಮನೆಯಲ್ಲಿ ಶಿವಲಿಂಗವನ್ನು ಇಟ್ಟು ಪೂಜಿಸುವಾಗ ದೇವನಿಗೆ ವಿಶೇಷ ಹಾಗೂ ಪವಿತ್ರವಾದ ಪೂಜಾ ವಿಧಾನಗಳು ನೆರವೇರಬೇಕು. ಇಲ್ಲವಾದರೆ ಸಾಕಷ್ಟು ಸಮಸ್ಯೆಗಳು ತಲೆದೂರುತ್ತವೆ. ಕೈಗೊಂಡ ಕೆಲಸ ಕಾರ್ಯಗಳಲ್ಲಿ ಹಿನ್ನೆಡೆ ಹಾಗೂ ಸೋಲು ಎದುರಾಗುವುದು. ಹಾಗಾಗಿ ಶಿವಲಿಂಗವನ್ನು ಮನೆಯಲ್ಲಿ ಇಟ್ಟು ಪೂಜಿಸುವವರು ಕೆಲವು ಮಾಹಿತಿಯನ್ನು ತಪ್ಪದೇ ತಿಳಿದಿರಬೇಕು. ಇಲ್ಲವಾದರೆ ಶಿವನ ಕೋಪಕ್ಕೆ ಗುರಿಯಾಗಬೇಕಾಗುವುದು
ಶಿವ ಲಿಂಗವನ್ನು ಮನೆಯಲ್ಲಿ ಇಟ್ಟು ಪೂಜಿಸುವಾಗ ಇಡುವ ಸ್ಥಳವು ವಾಸ್ತು ಪ್ರಕಾರ ಸೂಕ್ತವಾಗಿದೆಯೇ ಎನ್ನುವುದನ್ನು ಮೊದಲು ಪರಿಶೀಲಿಸಬೇಕು. ಪೂಜೆ ಮಾಡದ ಸ್ಥಳಗಳಲ್ಲಿ ಶಿವಲಿಂಗವನ್ನು ಇಡಬಾರದು. ನಿತ್ಯವೂ ದೇವರ ಧಾನವನ್ನು ಮಾಡುವ ಕೋಣೆ ಅಥವಾ ಸ್ಥಳದಲ್ಲಿ ಶಿವಲಿಂಗವನ್ನು ಸ್ಥಾಪಿಸಬೇಕು. ಸ್ಥಾಪಿಸುವ ಸ್ಥಳವು ಸದಾ ಸ್ವಚ್ಛ ಹಾಗೂ ಪವಿತ್ರತೆಯಿಂದ ಕೂಡಿರಬೇಕು. ನಿತ್ಯವೂ ಶಿವಲಿಂಗಕ್ಕೆ ತಪ್ಪದೇ ಆರಾಧನೆ ನೆರವೇರಬೇಕು.
ಹಾಲು ಎಷ್ಟೇ ತಣ್ಣಗಿದ್ದರೂ ತೊಂದರೆಯಿಲ್ಲ. ಫ್ರಿಜ್ನಲ್ಲಿ ಇಟ್ಟು ತಂಪಾಗಿಸಿರುವ ಹಾಲೇ ಆಗಿರಬಹುದು. ಯಾವುದೇ ಹವಾಮಾನ ಆಗಿರಲಿ, ಶಿವನಿಗೆ ತಣ್ಣನೆಯ ಶುದ್ಧ ಹಾಲು ಪ್ರಿಯವಾದದ್ದು. ಮನೆಯಲ್ಲಿ ಶಿವಲಿಂಗಕ್ಕೆ ನೀರಿನ ಕಾರಂಜಿ ಅಥವಾ ಅಭಿಷೇಕವನ್ನು ನಿರಂತರವಾಗಿ ಬೀಳುವಂತೆ ಮಾಡಿಟ್ಟರೆ ಅದು ಸಹ ಶ್ರೇಷ್ಠವಾದದ್ದು. ಆದರೆ ಶಿವಲಿಂಗದ ಮೇಲೆ ಬೀಳುವ ನೀರು ಹರಿದುಹೋಗುವಂತೆ ಇರಬೇಕು. ಅದು ಅಲ್ಲಿಯೇ ನಿಂತುಕೊಂಡಿರಬಾರದು.
Add Comment