ಶ್ರೀ ಶ್ರೀ ರವಿಶಂಕರ್ ಗುರೂಜಿ ರವರು ಕರ್ನಾಟಕ ಕಂಡ ಶ್ರೇಷ್ಠ ಆಧ್ಯಾತ್ಮಿಕ ಚಿಂತಕರು ಮತ್ತು ನಿಖರ ಜೋತಿಷ್ಯ ಶಾಸ್ತ್ರದ ಮುಖೇನ ಹೆಚ್ಚು ಹೆಸರುವಾಸಿಯಾದ ಪ್ರಖ್ಯಾತ ಜೋತಿಷ್ಯ ಶಾಸ್ತ್ರಜ್ಞರು ಕೂಡ ಆಗಿದ್ದಾರೆ.

ಕನ್ನಡ ಮತ್ತು ತೆಲುಗಿನ ಪ್ರಸಿದ್ಧ ಮಾಧ್ಯಮಗಳಲ್ಲಿ ನಿಖರ ಜೋತಿಷ್ಯದ ಮೂಲಕ ನೊಂದ ಜನರ ಸೇವೆ ಮಾಡಿ, ಅವರಲ್ಲಿ ಆತ್ಮವಿಶ್ವಾಸ ವೃದ್ಧಿಸಿದ್ದಾರೆ. ಪ್ರತಿದಿನ ಲಕ್ಷಾಂತರ ಜನರ ಮನೆ ಮನ ತಲುಪುತ್ತಿರುವ ಕರ್ನಾಟಕದಾದ್ಯಂತ ಹೆಸರು ಮಾಡಿದ, ಸರಳ ಸಜ್ಜನಿಕೆಯ ವ್ಯಕ್ತಿತ್ವದ ಶ್ರೀ ಶ್ರೀ ರವಿಶಂಕರ್ ಗುರೂಜಿಯವರ ಕಾರ್ಯಕ್ರಮಗಳು ದಿನದಿಂದ ದಿನಕ್ಕೆ ವೀಕ್ಷಿಸುತ್ತಿರುವವರ ಸಂಖ್ಯೆ ಅತಿ ವೇಗವಾಗಿ ಹೆಚ್ಚಾಗುತ್ತಿರುವುದು ಇವರ ಜನಪ್ರಿಯತೆಗೆ ಸಾಕ್ಷಿ .

ಶ್ರೀ ಶ್ರೀ ರವಿಶಂಕರ್ ಗುರೂಜಿರವರು “ಕೆರೆಯ ನೀರನ್ನು ಕೆರೆಗೆ ಚೆಲ್ಲಿ” ಎಂಬ ನಾಣ್ಣುಡಿಯಂತೆ ಜನರ ಸೇವೆಗಾಗಿ ತಮ್ಮ ಜೀವನ ಮುಡಿಪಾಗಿಟ್ಟಿದ್ದು, ನಾಗರೀಕ ಸಮಾಜದ ಮೂಲಭೂತ ಹಕ್ಕಾದ ಶಿಕ್ಷಣ ಮತ್ತು ಆರೋಗ್ಯ ವ್ಯಾಪಾರೀಕರಣ ಆಗುತ್ತಿರುವುದರ ಬಗ್ಗೆ ನೊಂದಿರುವ ಅವರು, ಏನಾದರೂ ಸಮಾಜಕ್ಕೆ ಅನುಕೂಲ ಮಾಡಬೇಕೆಂಬ ತುಡಿತದಿಂದ ಕಾರ್ಯಪ್ರವೃತ್ತರಾಗಿ ಮನುಷ್ಯನ ಆರೋಗ್ಯ ಮತ್ತು ಆಯಸ್ಸು ವೃದ್ಧಿಸಲು ಗುರೂಜಿಯವರು ಹಲವಾರು ಆಯುರ್ವೇದ ತಜ್ಞರ ಜೊತೆ ಸಮಾಲೋಚಿಸಿ ಹಲವಾರು ವರ್ಷಗಳ ಪರಿಶ್ರಮದಿಂದ ಕಂಡುಕೊಂಡ, ಹಲವಾರು ಆಯುರ್ವೇದದ ಉತ್ಪನ್ನಗಳನ್ನು ‘ನಮಾಮಿ ಶಂಕರ’ ಸಂಸ್ಥೆಯ ಮೂಲಕ ಜನರ ಮುಂದಿಡುವ ಪ್ರಯತ್ನ ಮಾಡಿದ್ದಾರೆ. ಜನರ ಜೀವನ ಶೈಲಿ ಮತ್ತು ಆರೋಗ್ಯವನ್ನು ಸುಧಾರಿಸಲು ಮಹಾ ಸಂಕಲ್ಪ ಮಾಡಿದ್ದಾರೆ.

ಶ್ರೀ ಶ್ರೀ ರವಿಶಂಕರ್ ಗುರೂಜಿರವರು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸಮಾಜಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ಉತ್ಸಾಹದ ಚಿಲುಮೆಯಾಗಿ ನಮ್ಮೆಲ್ಲರ ಸಾಮಾಜಿಕ ಹೊಣೆಗಾರಿಕೆಯನ್ನು ಜಾಗೃತಗೊಳಿಸಿದ್ದಾರೆ.
“ಒಗ್ಗಟ್ಟಿನಲ್ಲಿ ಬಲವಿದೆ ಒಟ್ಟಾಗಿ ನಡೆದರೆ ಫಲವಿದೆ ” ಎಂಬಂತೆ ಶ್ರೀ ಶ್ರೀ ರವಿಶಂಕರ್ ಗುರೂಜಿರವರ ಹೆಜ್ಜೆಯಲ್ಲಿ ನಾವುಗಳು ಹೆಜ್ಜೆಯಿಟ್ಟು ಅವರೊಂದಿಗೆ ಕೈಜೋಡಿಸಿದರೆ ಮಾತ್ರ ಈ ಮಹಾಯಜ್ಞ ಪೂರ್ಣಗೊಂಡಂತೆ.

‘ ಧ್ಯಾನಂ ಸರ್ವತ್ರ ಸಾಧನಂ
ದಾನಂ ಮಹಾ ಯಾಗಂ
ಆರೋಗ್ಯಂ ಸದಾ ಆಯುಷ್ಯಂ

guruji_11zon

Vision & Mission

Guruji

ನಮ್ಮ ಮನೆ ಅಂಗಳದಲ್ಲಿ ಸಿಗುವ ಗಿಡಮೂಲಿಕೆಗಳಿಂದ ಯಾವ ರೀತಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಅಂತಾ ನಮ್ಮ ಗುರುಹಿರಿಯರು ತಿಳಿಸಿದ್ದರೂ, ಅದನ್ನು ಇಷ್ಟು ದಿನ ನಿರ್ಲಕ್ಷಿಸಿ ಅನಾರೋಗ್ಯ ಹೆಚ್ಚಿಸಿಕೊಂಡೆವು. ‘ಹರಳೆಕಾಯಿ ಪಂಡಿತ ‘ಅಂತಾ ಕೇವಲ ಮಾಡಿ ಆಯುರ್ವೇದ ಮಹತ್ವ ಅರಿಯಲು ಹಿಂದೇಟು ಹಾಕಿದವರು, ಇಂದು ಪ್ರಾಶ್ಚಿಮಾತ್ಯ ದೇಶಗಳು ಯೋಗ ಮತ್ತು ಆಯುರ್ವೇದ ಮಹತ್ವ ಅರಿತು, ತಮ್ಮ ಜೀವನದಲ್ಲಿ ಅನುಸರಿಸಿ ಯಶಸ್ಸು ಗಳಿಸಿದ ತಕ್ಷಣ ಭಾರತೀಯರಲ್ಲೂ ಆಯುರ್ವೇದದ ಬಗ್ಗೆ ಜಾಗೃತಿ ಮೂಡುತ್ತಿದೆ .

ಯಾವುದೇ ಅಡ್ಡ ಪರಿಣಾಮವಿರದ ಅತ್ಯುತ್ತಮ ವೈದ್ಯಕೀಯ ಪದ್ಧತಿ ಆಯುರ್ವೇದ. ಇದು ನಮ್ಮ ಪೂರ್ವಜರು ಕೊಟ್ಟ ಅಮೂಲ್ಯ ಸಂಪತ್ತಾಗಿದೆ.
ರೋಗಗಳು ಬಂದಾಗ ಕೊರಗುವುದಕ್ಕಿಂತ , ಕಾಯಿಲೆ ಬರದ ಹಾಗೆ ದೇಹವನ್ನು ಕಾಪಾಡಿಕೊಳ್ಳುವುದು ಅತಿ ಮುಖ್ಯವಾಗಿದೆ .
ಆಯುರ್ವೇದದಲ್ಲಿ ಕೂಡ ಇದನ್ನೇ ಹೇಳಿದ್ದಾರೆ
‘ಸ್ವಸ್ಧಸ್ಯ ಸ್ವಾಸ್ಥ್ಯ ರಕ್ಷಣಂ ಅತುರಸ್ಯ ವಿಕಾರ ಪ್ರಶನಃ ಇದನ್ನು ಶುಶ್ರುತ ಹೇಳಿರುವಂತಹ ಮಾತು ಅಂದ್ರೆ ಇಂಗ್ಲಿಷ್ ನಲ್ಲಿ ‘prevention is better than cure ‘
ನಮಾಮಿ ಶಂಕರ ಸಂಸ್ಥೆಯಿಂದ ಬಿಡುಗಡೆ ಆಗುತ್ತಿರುವ ಆಯುರ್ವೇದ ಉತ್ಪನ್ನಗಳ ಗುರಿ ಮತ್ತು ಉದ್ದೇಶ ಕೂಡ ಇದೇ ಆಗಿದೆ.

ಶ್ರೀ ಶ್ರೀ ರವಿಶಂಕರ್ ಗುರೂಜಿಯವರ ನಮಾಮಿ ಶಂಕರ ಸಂಸ್ಥೆಯು ಜನರ ಆರೋಗ್ಯದ ಬಗ್ಗೆ ಅಪಾರ ಕಾಳಜಿ ಹೊಂದಿದ್ದು ,ಮುಂದಿನ ದಿನಗಳಲ್ಲಿ ಯಾವುದೇ ಅಡ್ಡ ಪರಿಣಾಮವಿರದ ಸಂಪೂರ್ಣ ಆಯುರ್ವೇದದ ಮತ್ತಷ್ಟು ಉತ್ಪನ್ನಗಳು ಮತ್ತು ಬಡವರ ,ದುರ್ಬಲರ ಏಳಿಗೆಗಾಗಿ ಗುರೂಜಿಯವರ ಮತ್ತಷ್ಟು ಯೋಜನೆಗಳು ಸಹ ಸದ್ಯದಲ್ಲೇ ನಿಮ್ಮ ಮುಂದೆ ಬರಲಿದ್ದು ಇದರ ಸಂಪೂರ್ಣ ಪ್ರಯೋಜನ ಪಡೆಯಬೇಕೆಂದು ಶ್ರೀ ಶ್ರೀ ರವಿಶಂಕರ್ ಗುರೂಜಿಯವರು ಮತ್ತು ನಮಾಮಿ ಶಂಕರ ಸಂಸ್ಥೆಯು ಆಶಿಸುತ್ತದೆ.

footer slide