ಗಣೇಶ ದಿಗ್ಬಂಧನ

logo
Ganesh Digbhandhana

 

 

 

 

ಯಾವುದೇ ಕಾರ್ಯಗಳನ್ನು ಆರಂಭಿಸುವ  ಮೊದಲು ನಾವು ವಿಘ್ನಗಳನ್ನು ನಿವಾರಿಸುವ ಗಣೇಶನನ್ನು ಪ್ರಾರ್ಥಿಸುತ್ತೇವೆ. ಸಕಲ ವರಗಳನ್ನು ಪಾಲಿಸುವ ಗಣೇಶ ದಿಗ್ಬಂಧನವನ್ನು ಪೂಜಿಸುವುದರಿಂದ ಎಲ್ಲ ಕಷ್ಟಗಳು ನಿವಾರಣೆ ಆಗುತ್ತವೆ, ಹೊಸ ಕೆಲಸ, ಹೊಸ  ಯೋಜನೆಗಳನ್ನು ಕೈಗೊಳ್ಳುವ ಮೊದಲು ವಿಘ್ನವಿನಾಶಕನನ್ನು ಸ್ಮರಿಸುವುದು ಉತ್ತಮ.ಇದರಿಂದ ನಿಮ್ಮ ಬುದ್ಧಿ ಶಕ್ತಿಯು ಗಣೇಶನ ಆಶೀರ್ವಾದದಿಂದ ತೀಕ್ಷ್ಣವಾಗುವುದು, ನಿಮ್ಮಲ್ಲಿ ಮಾನಸಿಕ ಶಕ್ತಿ ಹೆಚ್ಚಾಗುವುದು, ನಿಮ್ಮಲ್ಲಿರುವಂತಹ ಆಜ್ಞಾಚಕ್ರ ಜಾಗೃತವಾಗುವುದು. ಹಣಕಾಸು ಸಮಸ್ಯೆಗಳಿದ್ದಲ್ಲಿ ನಿವಾರಣೆಯಾಗುವುದು. ಉದ್ಯೋಗ ಸಮಸ್ಯೆ ದೂರವಾಗುವುದು ಹಾಗೂ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳು ಅಥವಾ ಉನ್ನತ ಮಟ್ಟದ ವಿದ್ಯಾಭ್ಯಾಸ ಮಾಡುವ ಯೋಜನೆಯಲ್ಲಿದ್ದರೆ ಗಣೇಶ ದಿಗ್ಬಂಧನವನ್ನು ಪೂಜಿಸುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದಾಗಿದೆ.

ಯಂತ್ರ ಪೂಜಿಸುವ ವಿಧಾನ

ಈ ಯಂತ್ರವನ್ನು ಅರಿಶಿನ ಬಣ್ಣದ ವಸ್ತ್ರವನ್ನು ಉಪಯೋಗಿಸಿ ಬುಧವಾರ ದಿನ ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಮನೆಯ ಮುಖ್ಯ ದ್ವಾರದ ಮೇಲೆ ಕಟ್ಟಬೇಕು , ಹಾಗೂ 180 ದಿನಗಳ ವರೆಗೆ ಈ ಯಂತ್ರಕ್ಕೆ ಪ್ರತಿನಿತ್ಯ ದೂಪ ಹಾಕಬೇಕು. ಪ್ರತಿನಿತ್ಯ “ಓಂ ಗಂ ಗಣಪತಯೈ ನಮಃ” ಎಂಬ ಮಂತ್ರ ಸಾರವನ್ನು 21 ಭಾರಿ  ಪಠಿಸಬೇಕು ಅಥವಾ ಆಲಿಸಬೇಕು ಹಗೂ ಚಿಕ್ಕ ಗಣೇಶನ ವಿಗ್ರಹಕ್ಕೆ ಗರಿಕೆಯಿಂದ ಅರ್ಚನೆ ಮಾಡಬೇಕು.

Send Us Enquiry