ಕಾಲಭೈರವ ದಿಗ್ಬಂಧನ

logo

 

 

 

 

ದುಷ್ಟರನ್ನು ನಿರ್ಮೂಲನೆ ಮಾಡಿ , ನಕಾರಾತ್ಮಕ ಶಕ್ತಿಯನ್ನು ನಾಶಮಾಡಲು ಮತ್ತು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಲು ಇರುವ ದೈವವೇ ಈ ಕಾಲಭೈರವ . ಕಾಲ ಭೈರವನನ್ನು ಆರಾಧಿಸುವುದರಿಂದ ಉತ್ತಮ ಸಮಯ ನಿರ್ವಹಣಾ ಕೌಶಲ್ಯ ಮತ್ತು ಪ್ರಯತ್ನಗಳಲ್ಲಿ ಸಮಯೋಚಿತ ಯಶಸ್ಸನ್ನು ಪಡೆಯಬಹುದು. ನಿಮ್ಮ ಕೆಟ್ಟ ಸಮಯವನ್ನು ಉತ್ತಮ ಸಮಯಕ್ಕೆ ಬದಲಾಯಿಸಬಹುದು  ಕೆಟ್ಟ ಕರ್ಮಗಳು ಸಾವಿನ ಭಯ ದೂರವಾಗುವುದು.  ತೃಪ್ತಿಕರ ಮತ್ತು ಆನಂದದಾಯಕ ಜೀವನವನ್ನು ನಡೆಸಲು ಸಹಾಯ ಮಾಡುತ್ತದೆ. ಅತಿಮುಖ್ಯವಾಗಿ ಕಾಲ ಭೈರವನನ್ನು ಸ್ಮರಿಸುವುದರಿಂದ ನಮಗೆ ಎದುರಾಗುವಂತಹ ವಾಹನ ಅಪಘಾತಗಳ ಭಯ, ಸಾವಿನ ಭಯ, ಕೆಟ್ಟ ಆಲೋಚನೆಗಳು, ವಿಕೃತ ಮನಸ್ಥಿತಿ, ದುಶ್ಚಟ ಈ ರೀತಿಯಾದಂತಹ ಹಲವಾರು ಸಮಸ್ಯೆಗಳು ದೂರವಾಗುತ್ತವೆ.

ಯಂತ್ರ ಪೂಜಿಸುವ ವಿಧಾನ

ಈ ಯಂತ್ರವನ್ನು ಕೆಂಪು ವಸ್ತ್ರವನ್ನು ಉಪಯೋಗಿಸಿ ಶನಿವಾರ ಅಥವಾ ಭಾನುವಾರ  ದಿನ ಬೆಳಗ್ಗೆ ಬ್ರಾಹ್ಮೀ ಮಹೂರ್ತದಲ್ಲಿ ಮನೆಯ ಮುಖ್ಯ ದ್ವಾರದ ಮೇಲೆ ಕಟ್ಟಬೇಕು , ಹಾಗೂ 180 ದಿನಗಳ ವರೆಗೆ ಈ ಯಂತ್ರಕ್ಕೆ ಪ್ರತಿನಿತ್ಯ ದೂಪ ಹಾಕಬೇಕು. ಪ್ರತಿನಿತ್ಯ ಕಾಲಭೈರವ ಅಷ್ಟೋತ್ತರ ಪಠಿಸಬೇಕು ಅಥವಾ ಆಲಿಸಬೇಕು ಸಾಮಾನ್ಯಾವಾಗಿ ಕಾಲಭೈರವ ಸ್ವಾಮಿಗೆಅಷ್ಟಮಿಯದಿನದಂದು ವಿಶೇಷ ಪೂಜೆ ಮಾಡಲಾಗುತ್ತದೆ. ಕಾಲಭೈರವ ಸ್ವಾಮಿಗೆ ಬೂದುಗುಂಬಳಕಾಯಿ ದೀಪ ಬೆಳಗಬೇಕು.

Send Us Enquiry