ಲಕ್ಷ್ಮಿದಿಗ್ಬಂದನ

logo
Lakshmi Digbhandhana

ಹಿಂದೂ ಧರ್ಮಿಯರ ಪ್ರಮುಖ ದೇವರುಗಳಲ್ಲಿ ಲಕ್ಷ್ಮಿದೇವಿಯು ಒಬ್ಬರಾಗಿದ್ದಾರೆ. ಲಕ್ಷ್ಮಿ ದೇವಿಯ ಇನ್ನೊಂದು ರೂಪವೇ ಧನಲಕ್ಷ್ಮೀ . ಸಂಪತ್ತಿನ ದೇವತೆ ಎಂದು ಕರೆಯಲಾಗುತ್ತದೆ. ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಕೇವಲ ಸಂಪತ್ತು ಮಾತ್ರವಲ್ಲದೆ, ಯಶಸ್ಸು ಹಾಗೂ ಸಮಾಜದಲ್ಲಿ ಗೌರವವು ಪ್ರಾಪ್ತಿಯಾಗುವುದು. ಸಮೃದ್ಧಿಯ ಸಂಕೇತವಾದ ಲಕ್ಷ್ಮಿ ದೇವಿಯು ಮನುಷ್ಯನ ಹಲವಾರು ಕುಂದು ಕೊರತೆಗಳನ್ನು ನೀಗಿಸುವ ಭಾಗ್ಯದಾತೆಯಾಗಿದ್ದಾಳೆ, ಹಾಗೂ ಮನುಷ್ಯನ ಹಲವಾರು ಸಮಸ್ಯೆಗಳನ್ನು ನಿವಾರಿಸುವಲ್ಲಿ ಪಾತ್ರಳಾಗಿದ್ದಾಳೆ. ಮನುಷ್ಯ ಯಾವಾಗಲು ಏನಾದರೊಂದು ಸಮಸ್ಯೆಗಳ ಸುಳಿಗಳಲ್ಲಿ ಸಿಲುಕಿ ಒದ್ದಾಡುತ್ತಿರುತ್ತಾನೆ. ಅಂತಹ ಸಮಸ್ಯೆಗಳಲ್ಲಿ ಹೆಚ್ಚಾಗಿ ಕಂಡುಬರುವುದು ಹಣದ ಕೊರತೆ. ಸಾಲ ಬಾದೆ, ಹಣಕಾಸಿನ ಸಮಸ್ಯೆ, ಕೊಟ್ಟ ಹಣ ಹಿಂತಿರುಗಿ ಬರದೇ ಇರುವುದು, ವ್ಯಾಪಾರ ವ್ಯವಹಾರಗಲ್ಲಿನ ಕಿರಿಕಿರಿ , ವ್ಯಹಾರಗಳಲ್ಲಿ ಸತತವಾಗಿ ನಷ್ಟ ಎದುರಿಸುತ್ತಿರುವುದು ಇಂತಹ ಹಲವಾರು ಸಮಸ್ಯೆಗಳಿಂದ ಮನುಷ್ಯ ದಿನೇ ದಿನೇ ಕುಗ್ಗುತ್ತಿದ್ದಾನೆ. ಈ ಸಮಸ್ಯೆಗಳಿಗೆ ಸಣ್ಣದೊಂದು ಪರಿಹಾರ ನಮ್ಮ ನಮಾಮಿ ಶಂಕರ ಸಂಸ್ಥೆಯಿಂದ ಶ್ರೀ ಶ್ರೀ ರವಿಶಂಕರ್ ಗುರೂಜಿಯವರುನೀಡಿದ್ದಾರೆ ಅದುವೇ ಲಕ್ಷ್ಮಿ ದಿಗ್ಬಂದನ. ಈ ಯಂತ್ರವನ್ನು ಪೂಜಿಸುವುದರಿಂದ ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುವುದು ಹಾಗೂ ಎಲ್ಲ ಪ್ರಯತ್ನಗಳಲ್ಲಿ ಯಶಸ್ಸು ಸಾಧಿಸುವಿರಿ.

ಯಂತ್ರ ಪೂಜಿಸುವ ವಿಧಾನ

ಲಕ್ಷ್ಮಿ ದಿಗ್ಬಂದನವನ್ನು ಭರಣಿ ನಕ್ಷತ್ರ,ಪೂರ್ವಾಷಾಡ ನಕ್ಷತ್ರ, ಪೂರ್ವ ಪಾಲ್ಗುಣಿನಕ್ಷತ್ರ, ಅಥವಾ ಶುಕ್ರವಾರ ಏಕಾದಶಿ ಇದ್ದರೆ ಇನ್ನು ಅದ್ಭುತ. ಇಂತಹ ದಿನಗಳಲ್ಲಿ ದಿಗ್ಬಂದನವನ್ನು ತಗೆದುಕೊಂಡು ಬಂದು ಕೆಂಪು ಬಣ್ಣದ ಬಟ್ಟೆಯಲ್ಲಿ ಹಾಕಿ ಮನೆಯ ಮುಖ್ಯ ದ್ವಾರದ ಮೇಲೆ ಕಟ್ಟಬೇಕು. ಪ್ರತಿನಿತ್ಯ ದೇವರ ಮನೆಯಲ್ಲಿ  ತುಪ್ಪದ ದೀಪ ಹಚ್ಚಬೇಕು, ಹಾಗೂ ಅದಕ್ಕೆ ಸ್ವಲ್ಪ ಹೊಂಗೆ ಎಣ್ಣೆಯನ್ನು ಬೆರೆಸಿದರೆ ಉತ್ತಮ. ಕಡ್ಡಾಯವಾಗಿ ಮನೆಯಲ್ಲಿ ತುಪ್ಪದ ನೈವೇದ್ಯವನ್ನು ಮಾಡಬೇಕು, ಹಾಗೂ 6 ಮಣ್ಣಿನ ದೀಪವನ್ನು ತೆಗೆದುಕೊಂಡು ಅದಕ್ಕೆ ಹೊಂಗೆ ಎಣ್ಣೆ ಹಾಕಿ ಕುಂಕುಮ ಬತ್ತಿಯನ್ನು ಹಾಕಿ ಹತ್ತಿರದಲ್ಲಿರುವ ಬಾಲಾಜಿ ದೇವಸ್ಥಾನಕ್ಕೆ ಹೋಗಿ ಲಕ್ಷ್ಮಿ ಹೆಸರಿನಲ್ಲಿ 6 ದೀಪಗಳನ್ನು ಹಚ್ಚಬೇಕು, ಹಾಗೂ ಲಕ್ಷ್ಮಿ ಹೆಸರಿನಲ್ಲಿ ಅರ್ಚನೆ ಮಾಡಿಸಬೇಕು.ಈ ರೀತಿ 48 ಶುಕ್ರವಾರ  ಮಡಿಯಿಂದ ಇದ್ದು, ವ್ರತವನ್ನು ಮಾಡಬೇಕು.

Send Us Enquiry