ವೇಣು ಗೋಪಾಲ ಯಂತ್ರ

logo
Venugopal 1

 

 

 

ಜಗತ್ ಪಾಲಕನಾದ ವಿಷ್ಣುವಿನ 8 ನೆಯ ಅವತಾರವೇ ಶ್ರೀ ಕೃಷ್ಣನ  ಅವತಾರ, ದೈವಿಕ ರೂಪನಾದ ಶ್ರೀ ಕೃಷ್ಣ ಸೃಷ್ಠಿಯಲ್ಲಿರುವ ದುಷ್ಟರಿಗೆ ಶಿಕ್ಷೆ,  ಹಾಗೂ ಶಿಷ್ಟರ ಪಾಲನೆಗಾಗಿ ಕೃಷ್ಣಾವತಾರದಲ್ಲಿ ಅವತರಿಸಿ ಬಂದ ಎನ್ನಲಾಗುತ್ತದೆ. ದೇವಕಿಯ ಗರ್ಭದಲ್ಲಿ ಜನಿಸಿ ಯಮುನಾ ನದಿ ತೀರದ ಗೋಕುಲದಲ್ಲಿ, ಯಶೋಧೆಯ ಮಡಿಲಿನಲ್ಲಿ ಮುದ್ದು ಕಂದನಾಗಿ ಆಡಿ ಬೆಳೆದು ತನ್ನ ತುಂಟ ತನದಿಂದ ಎಲ್ಲ ಹೆಣ್ಣು ಮಕ್ಕಳ ಮನಸ್ಸು ಕದ್ದ ಕಳ್ಳನಾಗಿದ್ದಾನೆ. ರಾಧೆ ಕೃಷ್ಣನ ಆತ್ಮವಾಗಿದ್ದರೆ ರುಕ್ಮಿಣಿ ಕೃಷ್ಣನ ದೇಹವಾಗಿದ್ದಳು. ಹೀಗೆ 16000 ಜನ ಹೆಂಡತಿಯರ ಮುದ್ದಿನ ಪತಿಯಾಗಿದ್ದ ಶ್ರೀ ಕೃಷ್ಣ ದೈವಾಂಶ ಸ್ವರೂಪನಾಗಿದ್ದು ಮನುಷ್ಯನ ಹಲವಾರು ತೊಂದರೆ ಹಾಗೂ ದೋಷಗಳಿಗೆ ಮುಕ್ತಿದಾತನಾಗಿದ್ದಾನೆ.ಮನುಷ್ಯ ಜೀವನದಲ್ಲಿ ಒಂದಲ್ಲ ಒಂದು ಸಮಸ್ಯೆಗಳನ್ನು ಎದುರಿಸುತ್ತ ಬಂದಿದ್ದಾನೆ. ಸುಖದ ಕೊರತೆ, ಏಕಾಂಗಿತನ, ಒಂಟಿತನದ ಛಾಯೆ, ಅತಿಯಾದ ದುಃಖ,  ಅಧಿಕಾರದ ಅಭಿವೃದ್ಧಿ,ಸಾಂಸಾರಿಕ ಸುಖದ ದೋಷ , ಶತ್ರುಗಳ ಕಾಟ, ಮನೆಯಲ್ಲಿ ನೆಮ್ಮದಿಯ ವಾತಾವರಣ ಉಂಟಾಗಲು, ಹಾಗೂ ಸಂತಾನ ಪ್ರಾಪ್ತಿಗಾಗಿ, ಈ ರೀತಿಯ ಮನುಷ್ಯನ  ಎಲ್ಲಆಸೆ ಆಕಾಂಕ್ಷೆಗಳು ಪರಿಪೂರ್ಣವಾಗಲು ಈ ಯಂತ್ರವನ್ನು ಪೂಜಿಸಬೇಕು.

ಯಂತ್ರವನ್ನು ಪೂಜಿಸುವ ವಿಧಾನ

ಒಂದು ಹಿತ್ತಾಳೆ ಅಥವಾ ಬೆಳ್ಳಿ ಅಥವಾ ಸ್ಟಿಲ್ ಪಾತ್ರೆಯಲ್ಲಿಅಕ್ಷತೆಯನ್ನು ಹಾಕಿ, ಮನೆದೇವರ ಮುಂದೆ ಇಟ್ಟು ಅದರಲ್ಲಿ ಈ ಕೃಷ್ಣನ ವಿಗ್ರಹವನ್ನು ಇಟ್ಟು ತುಳಸಿ ಪತ್ರೆ ಹಾಗೂ ಮಲ್ಲಿಗೆ ಹೂಗಳಿಂದ ಅಲಂಕರಿಸುತ್ತ , ಪ್ರತಿನಿತ್ಯ ದೂಪ ದೀಪ ನೈವೇದ್ಯಗಳಿಂದ ಪೂಜಿಸಬೇಕು . ಶ್ರೀ ಕೃಷ್ಣನಿಗೆ ಅತ್ಯಂತ ಪ್ರಿಯವಾದದ್ದು ಬೆಣ್ಣೆ ಮತ್ತು ಅವಲಕ್ಕಿ , ಅವಲಕ್ಕಿಯನ್ನು ಕೃಷ್ಣನಿಗೆ ನೈವೇದ್ಯ ಮಾಡಿ ಯಾರಾದರೂ ಬಡವರಿಗೆ ವೃದ್ಧರಿಗೆ ಹಾಗೂ ಚಿಕ್ಕ ಮಕ್ಕಳಿಗೆ ಪ್ರಸಾದದ ರೂಪದಲ್ಲಿ ನೀಡಬೇಕು. ಈ ರೀತಿಯಾಗಿ ನಿರಂತರವಾಗಿ 108 ದಿನಗಳವರೆಗೆ ಈ ವ್ರತಾಚರಣೆಯನ್ನು ಮಾಡಬೇಕು.

Send Us Enquiry